ಮಂಗಳೂರು: ಪುರಿ ಶ್ರೀ ಜಗನ್ನಾಥ ವಿಶ್ವಪ್ರಸಿದ್ಧ ರಥಯಾತ್ರೆಯ ಅಂಗವಾಗಿ ಕುಡುಪುಕಟ್ಟೆಯ ಇಸ್ಕಾನ್ ಜಗನ್ನಾಥ ಮಂದಿರದವರ ನೇತೃತ್ವದಲ್ಲಿ ಜೂನ್ 27 ರಂದು ಶುಕ್ರವಾರ ಜಗನ್ನಾಥ ರಥೋತ್ಸವ ನಡೆಯಲಿದೆ ಎಂದು ಇಸ್ಕಾನ್ ದೇವಾಲಯ ಮಂಗಳೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರೇಮ ಭಕ್ತಿ ದಾಸ ಹೇಳಿದರು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಸ್ಕಾನ್ ಸಂಸ್ಥಾಪಕ ಆಚಾರ್ಯ ಶ್ರೀಲ ಪ್ರಭುಪಾದರ ಪ್ರೇರಣೆಯಿಂದ ಪ್ರಪಂಚದಾದ್ಯಂತ ನ್ಯೂಯಾರ್ಕ್, ಲಂಡನ್, ಮಾಂಟ್ರಿಯಲ್, ಲಾಸ್ ಏಂಜಲೀಸ್, ಮೆಕ್ಸಿಕೊ, ಮೆಲ್ಬೋರ್ನ್ ಮತ್ತು ಭಾರತದಲ್ಲಿ – ನವದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಯಮತ್ತೂರು ಮುಂತಾದ ನಗರಗಳಲ್ಲಿ ಜಗನ್ನಾಥ ರಥಯಾತ್ರೆ ಉತ್ಸವವನ್ನು ಆಯೋಜಿಸುತ್ತಿದೆ. ಇದರಲ್ಲಿ ನೂರಾರು ಭಾರತೀಯ ಮತ್ತು ವಿದೇಶಿ ಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಉದ್ಘಾಟನಾ ಸಮಾರಂಭದಲ್ಲಿ ಇಸ್ಕಾನ್ ಹಿರಿಯ ಸನ್ಯಾಸಿಗಳು ಮತ್ತು ಮಂಗಳೂರಿನ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಜೂ.27ರಂದು ರಥದ ಮೆರವಣಿಗೆ ಮಧ್ಯಾಹ್ನ 03.30 ಕ್ಕೆ ನಾರಾಯಣ ಗುರು ವೃತ್ತದಿಂದ ಪ್ರಾರಂಭವಾಗಿ MCC ಜಂಕ್ಷನ್ -> TMA ಪೈ ಹಾಲ್ -> PVS ವೃತ್ತ -> ನವಭಾರತ ವೃತ್ತ -> ಕೊಡಿಯಾಲ್‌ಬೈಲ್ -> ಸಿಟಿ ಸೆಂಟರ್ ಮಾಲ್ -> KS ರಾವ್ ರಸ್ತೆ -> ಹಂಪನಕಟ್ಟೆ ಕ್ಲಾಕ್ ಟವರ್ ಬಳಿಕ ತೆರಳಿ ಟೌನ್ ಹಾಲ್‌ನಲ್ಲಿ ಮುಕ್ತಾಯಗೊಳ್ಳಲಿದೆ. ರಥವು ಸಂಜೆ 05.30 ರ ಸುಮಾರಿಗೆ ಪುರಭವನವನ್ನು ತಲುಪುವ ನಿರೀಕ್ಷೆಯಿದೆ, ಆ ನಂತರ ಪ್ರಸಾದ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ವಿಶೇಷ ಆಕರ್ಷಣೆ: ರಥಯಾತ್ರೆಯು ಪುರಿ ಶೈಲಿಯಲ್ಲಿ ನಡೆಯಲಿದ್ದು, 2000 ಕ್ಕೂ ಹೆಚ್ಚು ಮನೆಯವರು ಭಗವಂತನಿಗೆ ಭೋಗವನ್ನು ತರಲಿದ್ದಾರೆ. ಹಬ್ಬದ ಸಮಯದಲ್ಲಿ ಎಲ್ಲರಿಗೂ ಉಚಿತ ಊಟೋಪಚಾರದ ವ್ಯವಸ್ಥೆ ಇದೆ. ಪುರಭವನದಲ್ಲಿ ಯುವ ಸಬಲೀಕರಣ ಮತ್ತು ವ್ಯಕ್ತಿತ್ವ ನಿರ್ಮಾಣ ಕುರಿತ ಕಾರ್ಯಕ್ರಮಗಳು ಜರುಗಲಿದೆ ಎಂದರು.
ಭಗವಂತನ ರಥವನ್ನು ಎಳೆಯುವ ಯಾರಾದರೂ ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಎಲ್ಲಾ ಮಂಗಳೂರಿಗರು ತಮ್ಮ ಸ್ವಂತ ನಗರದಲ್ಲಿ ಈ ಶುಭ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಪ್ರೇಮ ಭಕ್ತಿದಾಸರು ವಿನಂತಿಸಿದರು. ಉದ್ಧವ ಪ್ರಾಣ ದಾಸರು ಈ ವೇಳೆ ಉಪಸ್ಥಿತರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝