ಜೂನ್‌ 27ರಂದು ಮಂಗಳೂರಿನಲ್ಲಿ ʻಐಸಿಎಐ ಎಂಎಸ್‌ಎಂಇ ಮಹೋತ್ಸವʼ

ಮಂಗಳೂರು: ಎಂಎಸ್‌ಎಂಇ ಮತ್ತು ಸ್ಪಾರ್ಟ್‌ಪ್ ಸಮಿತಿಯು ಅಂತರರಾಷ್ಟ್ರೀಯ ಎಂಎಸ್‌ಎಂಇ ದಿನದ ನೆನಪಿಗಾಗಿ ಜೂನ್ 27ರಂದು ಮಂಗಳೂರಿನ ಮಹೇಂದ್ರ ಆರ್ಕೇಡ್‌ನಲ್ಲಿರುವ ಐಸಿಎಐ ಭವನದಲ್ಲಿ ʻಐಸಿಎಐ ಎಂಎಸ್‌ಎಂಇ ಮಹೋತ್ಸವʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಸಿಎಐ ಯ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಿಎ.ಪ್ರಶಾಂತ್ ಪೈ ಕೆ. ಮಾಹಿತಿ ನೀಡಿದರು.


ಮಂಗಳೂರಿನ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಭಾರತದ ಪ್ರಮುಖ ಸಂಸ್ಥೆಯಾಗಿದ್ದು, ಇದನ್ನು 1949 ರಲ್ಲಿ ಸಂಸತ್ತಿನ ಕಾಯಿದೆಯಡಿಯಲ್ಲಿ ಸ್ಥಾಪಿಸಲಾಯಿತು. ಇದು ದೇಶದಲ್ಲಿ ಲೆಕ್ಕ ಪರಿಶೋಧಕರ ವೃತ್ತಿಯನ್ನು ನಿಯಂತ್ರಿಸುತ್ತದೆ ಮತ್ತು ಆರ್ಥಿಕ ಪರಿಣತಿ, ನೈತಿಕ ಮಾನದಂಡಗಳು: ಮತ್ತು ನೀತಿ ವಕಾಲತ್ತುಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಐಸಿಎಐ 4 ಸ್ಥಾಯಿ ಸಮಿತಿಗಳು, 40 ಸ್ಥಾಯಿಯಲ್ಲದ ಸಮಿತಿಗಳು ಮತ್ತು 15 ನಿರ್ದೇಶನಾಲಯಗಳನ್ನು ಹೊಂದಿದೆ. ಜೂನ್ 27ರ ʻಐಸಿಎಐ ಎಂಎಸ್‌ಎಂಇ ಮಹೋತ್ಸವʼ ಎಂಬ ಕಾರ್ಯಕ್ರಮ ರಾಷ್ಟ್ರವ್ಯಾಪಿ ಹಮ್ಮಿಕೊಳ್ಳಲಾಗಿದ್ದು, ಅತಿ ಹೆಚ್ಚು ಸಂಖ್ಯೆಯ ಎಂಎಸ್.ಎಂಬಗಳಿಗೆ ಒಂದೇ ದಿನದಲ್ಲಿ ನೇರ ಮಾರ್ಗದರ್ಶನ ಮತ್ತು ಸೌಲಭ್ಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ರಾಷ್ಟ್ರ ನಿರ್ಮಾಣ ಮತ್ತು ಉದ್ಯಮಶೀಲತಾ ಅಭಿವೃದ್ಧಿಗೆ ಐಸಿಎವಿನ ಅಚಲ ಬದ್ಧತೆಯನ್ನು ಬಲಪಡಿಸುತ್ತದೆ. ದೇಶಾದ್ಯಂತ 177- ಐಸಿಎಐ ಶಾಖೆಗಳ ಮೂಲಕ ಮಹೋತ್ಸವವನ್ನು ನಡೆಸಲಾಗುವುದು ಮತ್ತು ಎಂಎಸ್‌ಎಂಇಗಳು. ಸ್ಟಾರ್ಟ್‌ ಆಪ್‌ಗಳು, ಚಾರ್ಟಡ್್ರ ಅಕೌಂಟೆಂಟ್‌ಗಳು, ಬ್ಯಾಂಕ್‌ಗಳು ಸರ್ಕಾರಿ ಸಂಸ್ಥೆಗಳು ಮತ್ತು ಇತರ ಪ್ರಮುಖ ವ್ಯವಸ್ಥೆಯ ಪಾಲುದಾರರನ್ನು ಒಂದೇ ಛತ್ರಿಯಡಿಯಲ್ಲಿ ಒಟ್ಟುಗೂಡಿಸುತ್ತದೆ. ಈ ಕಾರ್ಯಕ್ರಮದ ಶೀರ್ಷಿಕೆ “ಒಂದು ದಿನ ಎಂಎಸ್ ಎಂಬ ಯ ಹೆಸರಿನಲ್ಲಿ ಲೆಕ್ಕ ಪರಿಶೋಧಕರು ಎಂಎಸ್‌ಎಂಇಯ ಸೇವೆಗಾಗಿʼ ಎನ್ನುವುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಎಂಎಸ್‌ಎಂಇಯ ಮಂಗಳೂರು ಶಾಖೆಯು ಐಸಿಎಐನ ಅತ್ಯಂತ ಕ್ರಿಯಾಶೀಲ ಶಾಖೆಗಳಲ್ಲಿ ಒಂದಾಗಿದ್ದು, 1,000- ವೃತ್ತಿಪರ ಮತ್ತು ಉದ್ಯೋಗದಲ್ಲಿರುವ ಸಿಎಗಳ ಬಲವಾದ ಸದಸ್ಯತ್ವ ಮತ್ತು 5,000+ ವಿದ್ಯಾರ್ಥಿ ನೆಲೆಯನ್ನು ಹೊಂದಿದೆ. ಶಾಖೆಯು ಆರ್ಥಿಕ ಸಾಕ್ಷರತೆ, ವೃತ್ತಿಪರ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸುತ್ತದೆ. ಅದರಂತೆ, ಇನ್ನಿಟ್ಯೂಟ್ ಆಫ್ ಚಾರ್ಟಡ್್ರ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAT) ಮಂಗಳೂರು ಶಾಖೆಯು, ಜೂನ್ 27, 2025 ರಂದು ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ಮಂಗಳೂರಿನ ಮಹೇಂದ್ರ ಆರ್ಕೇಡ್‌ನಲ್ಲಿರುವ ICAI ಭವನದಲ್ಲಿ ಅಂತರರಾಷ್ಟ್ರೀಯ MSME ದಿನವನ್ನು ಆಚರಿಸಲು ಒಂದು ದಿನವಿಡೀ ಆಚರಣೆಯನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME ಗಳು) ಮತ್ತು ನವೋದ್ಯಮಗಳಿಗೆ ನಿರ್ಣಾಯಕ ಜ್ಞಾನ, ಸಂಪನ್ಮೂಲಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಎಂದು ಹೇಳಿದರು.
ಐಸಿಎಐ ಯ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಸಿಎ ಡೇನಿಯಲ್ ಮಾರ್ಚ್ ಪೆರೇರಾ, ಕಾರ್ಯದರ್ಶಿ ಸಿಎ ಮಮತಾ ರಾವ್, ಖಜಾಂಚಿ, ಸಿಎ ಬಾಲಸುಬ್ರಮಣ್ಯಂ ಎನ್, ಎಸ್‌ಐಸಿಎಎಸ್‌ಎ ಅಧ್ಯಕ್ಷ ಸಿಎ ನಿತಿನ್ ಬಾಳಿಗಾ, ಸದಸ್ಯರಾದಸಿಎ ಕೃಷ್ಣಾನಂದ ಪೈ ಹಾಗೂ ಸಿಎ ಗೌರವ್ ಹೆಗ್ಡೆ ಉಪಸ್ಥಿತರಿದ್ದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!