ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಇದರ ಜಂಟಿ ಸಂಸ್ಥೆಗಳ ಆಶ್ರಯದಲ್ಲಿ “ವಿಶ್ವ ಯೋಗ ದಿನಾಚರಣೆ

ಹಳೆಯಂಗಡಿ: ಮೈಭಾರತ್, ದಕ್ಷಿಣ ಕನ್ನಡ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ಆಶ್ರಯದಲ್ಲಿ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ (ರಿ), ಕಿಶೋರ – ಕಿಶೋರಿ ಸಂಘ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ ದ.ಕ ಇದರ ಸಹಕಾರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ – 2025 ಕಾರ್ಯಕ್ರಮವು 21.06.2025 ಶನಿವಾರ ಸಂಜೆ 5.30 ರಿಂದ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೈ ಭಾರತ್ ದಕ್ಷಿಣ ಕನ್ನಡ ಇದರ ಜಿಲ್ಲಾ ಯುವ ಅಧಿಕಾರಿ ಶ್ರೀ ವಿಲಾಸ್ ಕೆ. ಟಿ.ಕೆ ಹಾಗೂ ಶ್ರೀ ಜಗದೀಶ್ ಹಿರಿಯ ಅಧಿಕಾರಿಗಳು ಮೈ ಭಾರತ್ ದಕ್ಷಿಣ ಕನ್ನಡ ಇವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ್ ಟಿ. ಜಿ, ಪ್ರಧಾನ ಕಾರ್ಯದರ್ಶಿ ಹಾಗೂ ಯೋಗ ಶಿಕ್ಷಕರು ಆಗಿರುವ ಶ್ರೀ ಹಿಮಕರ ಕೋಟ್ಯಾನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಮೋಹನ್ ಬಂಗೇರ, ಯುವತಿ ಮಂಡಲದ ಪ್ರಧಾನ ಕಾರ್ಯದರ್ಶಿ ಕುಮಾರಿ ದಿವ್ಯಶ್ರೀ ಕೋಟ್ಯಾನ್ ಮಹಿಳಾ ಮಂಡಲದ ಕೋಶಾಧಿಕಾರಿ ಶ್ರೀಮತಿ ರಾಜೇಶ್ವರಿ ಉಪಸ್ಥಿತರಿದ್ದರು.

ಉದ್ಘಾಟನ ಸಮಾರಂಭದ ನಂತರ ಯೋಗ ಶಿಕ್ಷಕರಾದ ಶ್ರೀ ಹಿಮಕರ ಕೋಟ್ಯಾನ್ ಕದಿಕೆ ಇವರು ಯೋಗ ದಿನಾಚರಣೆಯ ಮಹತ್ವ ಹಾಗೂ ಯೋಗ ಮಾಡುವುದರ ಪ್ರಯೋಜನವನ್ನು ತಿಳಿಸುತ್ತಾ ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡುವ ಬಗ್ಗೆ ಕೆಲವೊಂದು ಯೋಗದ ಆಸನಗಳನ್ನು ತಿಳಿಸಿದರು. ಜಂಟಿ ಸಂಸ್ಥೆಯ ಹೆಚ್ಚಿನ ಸದಸ್ಯರು, ಕಿಶೋರ, ಕಿಶೋರಿ ಸಂಘದ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸವನ್ನು ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ್ ಟಿ. ಜಿ, ಅತಿಥಿಗಳನ್ನು ಸ್ವಾಗತಿಸಿದರು. ಯುವಕ ಮಂಡಲದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಸುಧಾಕರ್ ಅಮೀನ್ ಕಾರ್ಯಕ್ರಮವನ್ನು ನಿರೂಪಿಸಿದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!