ಜು. 22 ರಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ 3871 ಅಗೆಲು ಸೇವೆ

ಬಂಟ್ವಾಳ : ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾದ ಬಂಟ್ವಾಳದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಈ ವರ್ಷದ ಅತೀ ಹೆಚ್ಚು ಅಗೆಲು ಸೇವೆ ಜುಲೈ 22 ರಂದು ನಡೆದಿದೆ ಎಂದು ದೈವಸ್ಥಾನದ ಅಧಿಕೃತ ಮಾಹಿತಿ ತಿಳಿಸಿದ್ದು, ಒಟ್ಟು 3871 ಅಗೆಲು ಸೇವೆ ನಡೆದಿದೆ ಎಂದು ತಿಳಿಸಿದ್ದಾರೆ.

 

 

ಕಳೆದ ವರ್ಷ ಕೂಡ ಜೂನ್ ತಿಂಗಳಿನಿಂದ ಅಗಸ್ಟ್ ತಿಂಗಳ ವರೆಗೆ ಇದೇ ಮಾದರಿಯಲ್ಲಿ ಅಗೆಲು ಸೇವೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಜೂನ್ 2 ರಂದು 3908 ಅಗೆಲು ಸೇವೆ ನಡೆದಿತ್ತು.

ಇಲ್ಲಿ ವಾರದ ಮೂರು ದಿನ ಅಂದರೆ ಆದಿತ್ಯವಾರ ,ಮಂಗಳವಾರ ಮತ್ತು ಶುಕ್ರವಾರ ಮೂರು ದಿನಗಳ ಕಾಲ ಇಲ್ಲಿ ಅಗೆಲು ಸೇವೆ ನಡೆಯುತ್ತದೆ. ಆಟಿ ತಿಂಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಅಗೆಲು ಸೇವೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!