ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದಲ್ಲಿ 20ನೇ ವರ್ಷದ ಶ್ರೀ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಸೆಪ್ಟಂಬರ್ 27ರಂದು ಮರೋಳಿ ಜೋಡುಕಟ್ಟೆಯ ಸಮಾಜ ಸೇವಾ ಪ್ರತಿಷ್ಠಾನದ ಆವರಣದ ವಜ್ರಕಾಯ ರಂಗ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 20ನೇ ವರ್ಷದ ಶ್ರೀ ಗಣೇಶೋತ್ಸವವು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಸ್ವಾತಂತ್ರö್ಯಪೂರ್ವದಲ್ಲಿ ಜನರಲ್ಲಿ ಒಗ್ಗಟ್ಟು ಮೂಡಿಸಲು ಬಾಲಗಂಗಾಧರ ತಿಲಕ್ ಅವರ ಚಿಂತನೆಯಲ್ಲಿ ಮೂಡಿಬಂದAತಹ ಸಾರ್ವಜನಿಕ ಶ್ರೀಗಣೇಶೋತ್ಸವ ಅಂದು ಬಹಳ ಮಹತ್ವವನ್ನು ಪಡೆದುಕೊಂಡಿತ್ತು. ಇದೇ ಹಾದಿಯಲ್ಲಿ ಸಾಗಿರುವ ಮರೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧಾರ್ಮಿಕ ಚಿಂತನೆಯನ್ನಿರಿಸಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸಮಾಜ ಸೇವಾ ಪ್ರತಿಷ್ಠಾನ ಬರಿಯ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾತ್ರವಲ್ಲದೆ ಹಮ್ಮಿಕೊಂಡು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಮರೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕೆ ಕೆಂಬಾರ್. ಕೋಶಾಧಿಕಾರಿ ಹರೀಶ್ ಶೆಟ್ಟಿ, ಸೂರ್ಯನಾರಾಯಣ ದೇವಸ್ಥಾನ ಆಡಳಿತ ಮೊಕ್ತೇಸರ ಗುಡ್ಡೆ ಗುತ್ತು ಗಣೇಶ್ ಶೆಟ್ಟಿ, ಸೂರ್ಯನಾರಾಯಣ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ. ನಿಕಟಪೂರ್ವ ಕಾರ್ಪೊರೇಟರ್ ಕೇಶವ ಮರೋಳಿ, ಜಯರಾಂ ಮರೋಳಿ..ರೋಹಿತಾಕ್ಷ ಮರೋಳಿ..ಜ್ಯೋತಿ ಕುಮಾರ್..ರತನ್ ಶೆಟ್ಟಿ ಕಂಕನಾಡಿ..ನವೀನ್ ಪ್ರಭು..ಆಶಾ ರಾಜೀವ್..ಪ್ರಶಾಂತ್ ಮರೋಳಿ..ಕಿಶೋರ್ ಶೆಟ್ಟಿ ಸೂರ್ಯನಗರ.. ಭವಾನಿ ಶಂಕರ್ ಮರೋಳಿ..ಸರಳ ಎಸ್..ರಾಘವೇಂದ್ರ ಶೆಟ್ಟಿ..ತುಷಾರ್ ಎ. ಕೆಂಬಾರ್ ಮತ್ತಿತರರು ಉಪಸ್ಥಿತರಿದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!