ಇಸ್ರೇಲ್‌ನ ಅತಿದೊಡ್ಡ ಸೊರೊಕಾ ಆಸ್ಪತ್ರೆಯನ್ನು ಧ್ವಂಸಗೊಳಿಸಿದ ಇರಾನ್!

ಟೆಲ್‌ ಅವಿವ್‌/ಟೆಹ್ರಾನ್‌: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ (Israel-Iran Conflict) 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಇರಾನ್‌ ಇಸ್ರೇಲ್‌ ಮೇಲೆ ಖಂಡಾಂತರ ಕ್ಷಿಪಣಿ ಉಡಾಯಿಸಿ ದಕ್ಷಿಣ ಭಾಗದ ಅತಿದೊಡ್ಡ ಆಸ್ಪತ್ರೆ ಬೀರ್‌ಶೆಬಾದಲ್ಲಿರುವ ಸೊರೊಕಾವನ್ನು ಧ್ವಂಸಗೊಳಿಸಿದೆ. ಇದರಿಂದ ಇಲ್ಲಿ ಅಪಾರ ಸಾವು ನೋವು ಸಂಭವಿಸಿದೆ.

ಇಲ್ಲಿನ ಮೇಯರ್ ರುವಿಕ್ ಡ್ಯಾನಿಲೋವಿಚ್ ಸಾರ್ವಜನಿಕರಿಗೆ “ಎಚ್ಚರ ಮತ್ತು ಜಾಗರೂಕರಾಗಿರಲು” ಕರೆ ನೀಡಿದ್ದಾರೆ. “ಎಲ್ಲವೂ ದೇವರ ಇಚ್ಛೆ. ನಾವು ಬಲಶಾಲಿಗಳು, ಇಂತಹಾ ಘಟನೆಗಳು ಮತ್ತೆ ಸಂಭವಿಸುವ ಸಾಧ್ಯತೆಯಿದೆ, ಆದ್ದರಿಂದ ನಾವು ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ.

ಆಸ್ಪತ್ರೆಯ ಮೇಲೆಯೇ ದಾಳಿ ನಡೆಸುವ ಇರಾನ್‌ ಇನ್ನು ಪರಮಾಣು ಶಸ್ತ್ರಾಸ್ತ್ರ ಕೈಗೆ ಸಿಕ್ಕರೆ ಏನು ಮಾಡಬಹುದು ಎಂದು ಊಹಿಸಿ. ಇರಾನ್‌ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ, ಇರಾನ್ ಆಡಳಿತವನ್ನು ಉರುಳಿಸುವವರೆಗೆ ಮತ್ತು ಅದರ ಕ್ಷಿಪಣಿ ದಾಸ್ತಾನು ನಾಶವಾಗುವವರೆಗೆ ನಾವು ಯುದ್ಧ ಮುಂದುವರಿಸುತ್ತೇವೆ ಎಂದು ಇಸ್ರೇಲ್ ಬೀಟೆನು ಮುಖ್ಯಸ್ಥ ಅವಿಗ್ಡರ್ ಲಿಬರ್ಮನ್ ಗುಡುಗಿದ್ದಾರೆ.

ಇಸ್ರೇಕ್‌ ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್ ಟ್ವೀಟ್ ಮಾಡಿ “ಇದಕ್ಕೆ ಇರಾನ್ ಭಾರಿ ಬೆಲೆ ತೆರಬೇಕಾಗಿದೆ. ಇದು ಇಸ್ರೇಲ್ ಜನರ ಅತ್ಯುತ್ತಮ ಸಮಯ. ನಮ್ಮ ರಾಷ್ಟ್ರ ಬಲಿಷ್ಠವಾಗಿದೆ. ನಮ್ಮ ಜನರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಮ್ ಫ್ರಂಟ್ ಕಮಾಂಡ್ ಸೂಚನೆಗಳನ್ನು ಅನುಸರಿಸುವುದನ್ನು ಮುಂದುವರಿಸಿ. ಅವರು ನಮ್ಮ ಜೀವಗಳನ್ನು ಉಳಿಸುತ್ತಾರೆ” ಎಂದು ಬರೆದಿದ್ದಾರೆ.

ಇಸ್ರೇಲ್ ವೈದ್ಯಕೀಯ ಸಂಘದ ಅಧ್ಯಕ್ಷ ಪ್ರೊ. ಜಿಯಾನ್ ಹಗೆ ಬೀರ್ಶೆಬಾ ಆಸ್ಪತ್ರೆಯ ಮೇಲೆ ಇರಾನಿನ ಕ್ಷಿಪಣಿ ದಾಳಿಯನ್ನು ಖಂಡಿಸಿ, ಅದನ್ನು ಯುದ್ಧ ಅಪರಾಧ ಎಂದು ಕರೆದಿದ್ದಲ್ಲದೆ, ಇಡೀ ಪ್ರಪಂಚದ ಕಣ್ಣುಗಳು ಬೀರ್ಶೆಬಾದ ಸೊರೊಕಾ ಆಸ್ಪತ್ರೆಯ ಕಡೆಗೆ ತಿರುಗಬೇಕು” ಎಂದು ಹೇಳಿದ್ದಾರೆ.

ಸೊರೊಕಾ ವೈದ್ಯಕೀಯ ಕೇಂದ್ರದ ಮಹಾನಿರ್ದೇಶಕ ಪ್ರೊ. ಶ್ಲೋಮಿ ಕೊಡೇಶ್ ಅವರು ಇಂದು ಬೆಳಿಗ್ಗೆ ಕ್ಷಿಪಣಿ ದಾಳಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಸೊರೊಕಾದಲ್ಲಿರುವ ಹಳೆಯ ಶಸ್ತ್ರಚಿಕಿತ್ಸಾ ವಾರ್ಡ್ ಕಟ್ಟಡಕ್ಕೆ ಕ್ಷಿಪಣಿ ಢಿಕ್ಕಿ ಹೊಡೆದಿದೆ. ಇದು ಇತ್ತೀಚಿನ ದಿನಗಳಲ್ಲಿ ಸ್ಥಳಾಂತರಿಸಲಾದ ತುಲನಾತ್ಮಕವಾಗಿ ಹಳೆಯ ಕಟ್ಟಡವಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಯಲ್ಲಿನ ಇತರ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿದೆ. ಎಲ್ಲಾ ರೋಗಿಗಳು ಮತ್ತು ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಕೆಲವರು ಸ್ಫೋಟದ ಸದ್ದಿನಿಂದಾಗಿ ಲಘುವಾಗಿ ಗಾಯಗೊಂಡಿದ್ದಾರೆ ಎಂದು ಕೊಡೇಶ್ ಹೇಳಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!