ಹೃದಯಾಘಾತಕ್ಕೆ 25ರ ಯುವಕ ಬಲಿ

ಉಳ್ಳಾಲ: ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ಮುಂಜಾನೆ ಯುವಕ ಸಾವನ್ನಪ್ಪಿದ್ದಾರೆ. ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್(25) ಮೃತ ದುರ್ದೈವಿ.

ನಡುಪದವು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿನಯ್ ಉದ್ಯೋಗಲ್ಲಿದ್ದರು. ಶಬರಿಮಲೆ ಯಾತ್ರೆಗೆ ತೆರಳುವ ಸಂದರ್ಭ ಕಾಲಿನ ಕಲ್ಲು ಚುಚ್ಚಿದ್ದರಿಂದ ಗಾಯ ಜಾಸ್ತಿಯಾಗಿ ಬೆರಳನ್ನು ಕತ್ತರಿಸಲಾಗಿತ್ತು. ಈ ಹಿಂದೆ ದಪ್ಪ ಶರೀರವನ್ನು ಹೊಂದಿದ್ದ ವಿನಯ್ ಡಯೆಟಿಂಗ್ ಮೂಲಕ ತೂಕವನ್ನು ಇಳಿಸಿದ್ದರು ಎಂದು ತಿಳಿದುಬಂದಿದೆ.

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಸಕ್ರಿಯ ಸೇವೆ ಮಾಡುತ್ತಿದ್ದರು. ಬಳ್ಳಾರಿ ಮೂಲದವರಾಗಿರುವ ಕುಟುಂಬ ಕಳೆದ 25 ವರ್ಷಗಳಿಂದ ದೇರಳಕಟ್ಟೆ ಕಾನೆಕೆರೆಯಲ್ಲಿ ವಾಸವಿದ್ದರು. ಮೃತ ವಿನಯ್, ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

error: Content is protected !!