ಬೆಂಗಳೂರು: ಮಾಜಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಪೊಲೀಸರ ಸಂಭಾವ್ಯ ದಾಳಿಗಳ ಬಗ್ಗೆ ಮಾಹಿತಿ ಸೋರಿಕೆ ಮಾಡುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಕೋಟಿಗಟ್ಟಲೆ ಹಣ ಸುಲಿಗೆ ಮಾಡಿರುವ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿದ ಆರೋಪವಿದೆ.
ಜೂನ್ 2 ರಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಬಂಧಿಸಿದ ಚಿತ್ರದು
ರ್ಗದ ನಿಂಗಪ್ಪ ಸಾವಂತ್ (46ವ) ಅಲಿಯಾಸ್ ಜಿ. ನಿಂಗಪ್ಪ ಅವರ ವಿಚಾರಣೆ ವೇಳೆ, ಸರ್ಕಾರಿ ಅಧಿಕಾರಿಗಳಿಂದ ಸುಲಿಗೆ ಮಾಡಿದ್ದಾನೆ ಎಂದು ಹೇಳಲಾದ ಹಣವನ್ನು ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಐಪಿಎಸ್ ಅಧಿಕಾರಿಗಳ ಹೆಸರುಗಳು ಸೇರಿದಂತೆ ಬಹು ಹೆಸರುಗಳಲ್ಲಿ ನೋಂದಾಯಿಸಲಾದ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.
ಕೇಂದ್ರೀಕೃತ ಮತ್ತು ವಿಕೇಂದ್ರೀಕೃತ ಕ್ರಿಪ್ಟೋಕರೆನ್ಸಿ ವಹಿವಾಟಿನ ಮೂಲಕ ನಿಂಗಪ್ಪ ಹೂಡಿಕೆ ಮಾಡಿದ ಒಟ್ಟು ಮೊತ್ತ ಎಷ್ಟೆಂದು ಖಚಿತಪಡಿಸಿಕೊಳ್ಳಲು ಲೋಕಾಯುಕ್ತ ಪೊಲೀಸರು ಸುಮಾರು 25 ಕಂಪನಿಗಳಿಗೆ ಪತ್ರ ಬರೆದಿದ್ದಾರೆ. ಚಿತ್ರದುರ್ಗದಲ್ಲಿ ನಿಯೋಜನೆಗೊಂಡಿದ್ದ ನಿಂಗಪ್ಪನನ್ನು ಕೆಲವು ವರ್ಷಗಳ ಹಿಂದೆ ಸೇವೆಯಿಂದ ವಜಾಗೊಳಿಸಲಾಗಿತ್ತು.
ನಿಂಗಪ್ಪನ ಮೊಬೈಲ್ ಫೋನ್ ನ್ನು ಸಿಐಡಿ ಸೈಬರ್ ವಿಭಾಗಕ್ಕೆ ಕ್ರಿಪ್ಟೋಕರೆನ್ಸಿ ವಹಿವಾಟುಗಳ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಆರಂಭಿಕ ತನಿಖೆಯಲ್ಲಿ ಅವರು ಬೈನಾನ್ಸ್ ಮತ್ತು ಬಿಟ್‌ಗೆಟ್ ಸೇರಿದಂತೆ ಎಂಟು ಕ್ರಿಪ್ಟೋಕರೆನ್ಸಿ ವಿನಿಮಯ ವೇದಿಕೆಗಳಲ್ಲಿ 4.19 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಿಂಗಪ್ಪ ಹೆರಿನಲ್ಲಿ, ಆತನ ಪತ್ನಿ ಚಂದ್ರಕಲಾ ಹೆಸರಿನಲ್ಲಿ ಮತ್ತು ಕೆಲವು ಅಧಿಕಾರಿಗಳ ಹೆಸರಿನಲ್ಲಿ ಹೂಡಿಕೆ ಮಾಡಲಾಗಿದೆ. ಲೋಕಾಯುಕ್ತ ಪೊಲೀಸರು ಚಿತ್ರದುರ್ಗದಲ್ಲಿರುವ ಅವರ ನಿವಾಸದಿಂದ ಸುಮಾರು 90 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಹಲವಾರು ಅಪರಾಧ ದಾಖಲೆಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.