ಮೂಲ್ಕಿ: ಮೂಲ್ಕಿಯ ಶಾಂಭವಿ ಹೊಳೆಯ ಬಪ್ಪನಾಡು ಭಾಗದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಮೃತದೇಹ ಕೊಳೆಯುವ ಸ್ಥಿತಿಯಲ್ಲಿದೆ. ಶಾಂಭವಿ ಹೊಳೆಯಲ್ಲಿ ತೇಲಿ ಬರುತ್ತಿದ್ದ ಶವವನ್ನು ಗಮನಿಸಿದ ಸ್ಥಳೀಯರು ಮೇಲೆತ್ತಿ ದಡಕ್ಕೆ ಸಾಗಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮೂಲ್ಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಾರಿಸುದಾರರಿದ್ದಲ್ಲಿ ಮೂಲ್ಕಿ ಠಾಣೆಯಲ್ಲಿ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.