ಥೈಪೆಯಲ್ಲಿ ನಡೆದ ವೇಗದ ಓಟ, ಲಾಂಗ್‌ ಜಂಪ್‌ನಲ್ಲಿ ಎರಡು ಬೆಳ್ಳಿ ಪದಕ ಪಡೆದ ಹಿರಿಯ ನ್ಯಾಯವಾದಿ ಡಿ. ಪದ್ಮನಾಭಕುಮಾರ್‌

ಮಂಗಳೂರು: ಇತ್ತೀಚೆಗೆ ಚೈನಾದ ಥೈವಾನ್ ಥೈಪೆ ಯಲ್ಲಿ ನಡೆದ WMG [World Masters Olympics] 2025 ರಲ್ಲಿ ವೇಗದ ಓಟಗಳಾದ 100, 200, 400, 4×100, 4×400 ಮತ್ತು ಲಾಂಗ್ ಜಂಪ್ ವಿಭಾಗಗಳಲ್ಲಿ ಭಾಗವಹಿಸಿ ಎರಡು ಬೆಳ್ಳಿ ಪದಕಗಳನ್ನು ಪಡೆದಿದ್ದೇನೆ ಎಂದು ಮಂಗಳೂರಿನ ಹಿರಿಯ ನ್ಯಾಯವಾದಿ ಡಿ. ಪದ್ಮನಾಭಕುಮಾರ್‌ [ಪನ್ನ ಪ್ರಸಾದ್] ಹೇಳಿದರು.


ಮಂಗಳೂರಿನ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಇದು 7ನೇ ಭಾಗವಹಿಸಿದ ಅವರು ಅಂತರಾಷ್ಟ್ರೀಯ ಕ್ರೀಡಾಕೂಟವಾಗಿದ್ದು, ಈ ಹಿಂದೆ ಶ್ರೀಲಂಕಾದಲ್ಲಿ 2 ಬಾರಿ, ಸಿಂಗಾಪುರದಲ್ಲಿ 2 ಬಾರಿ, ಏಶಿಯನ್ ಮೀಟ್, WMG 2017 ನ್ಯೂಜಿಲ್ಯಾಂಡ್‌ನ ಆಗ್ಲೆಂಡ್ ಮತ್ತು 2018 ರಲ್ಲಿ ಪೆನಾಗ್ ಮಲೇಶಿಯಾದಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದೇನೆ. ನನ್ನನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಎರಡು ಬಾರಿ, ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಮಲೇಶಿಯಾದ ಮುಖ್ಯ ಮಂತ್ರಿಗಳಿಂದ ಆರು ಬಾರಿ ಸನ್ಮಾನಿಸಿದ್ದಾರೆ. ಈ ಕೂಟದಲ್ಲಿ 45,000 ಕ್ರೀಡಾ ಪಟುಗಳೊಂದಿಗೆ, 127 ರಾಷ್ಟ್ರಗಳು ಭಾಗವಹಿಸಿದ್ದವು. ಅಲ್ಲದೆ, ಇವರ ವಿಭಾಗದಲ್ಲಿ ಕನಿಷ್ಟ 25 ರಿಂದ 35 ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದು ಹೇಳಿದರು.

error: Content is protected !!