ಉಡುಪಿ: ಕುಂದಾಪುರದ ಕೋಡಿ ಸೇತುವೆಯ ಬಳಿ ಮಹಿಳೆಯೋರ್ವಳು ಸ್ಕೂಟರ್, ಚಪ್ಪಲಿ ಬಿಟ್ಟು ಮಹಿಳೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ವಿಠ್ಠಲವಾಡಿ ನಿವಾಸಿ ಹೀನಾ ಕೌಶರ್(33) ನಾಪತ್ತೆಯಾದ ವಿವಾಹಿತೆ.
ನಾಪತ್ತೆಯಾದ ಮಹಿಳೆಯ ಪತಿ ವಿದೇಶದಲ್ಲಿದ್ದು, ತನ್ನಿಬ್ಬರು ಮಕ್ಕಳೊಂದಿಗೆ ತಾಯಿ ಜೊತೆ ವಾಸವಾಗಿದ್ದರು. ಸೋಮವಾರ ಬೆಳಿಗ್ಗೆ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬರುತ್ತಿತ್ತು.
ಹುಡುಕಾಡಿದಾಗ ಈಕೆಯ ಚಪ್ಪಲಿ ಹಾಗೂ ಸೇತುವೆ ಕೋಡಿ ಸೇತುವೆ ಬಳಿ ಪತ್ತೆಯಾಗಿದೆ. ಆತಂಕಗೊಂಡ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಸೇತುವೆ ಕೆಳಗಿನ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.