ಅಬ್ದುಲ್ ರಹ್ಮಾನ್ ಅಂತ್ಯಕ್ರಿಯೆ : ಸಾವಿರಾರು ಮಂದಿ ಭಾಗಿ

ಬಂಟ್ವಾಳ: ದುಷ್ಕರ್ಮಿಗಳಿಂದ ನಿನ್ನೆ ಭೀಕರವಾಗಿ ಹತ್ಯೆಗೀಡಾಗಿದ್ದ ಅಬ್ದುಲ್ ರಹ್ಮಾನ್ ಮೃತದೇ ದಫನ ಕ್ರಿಯೆಯು ಕುರಿಯಾಳ ಗ್ರಾಮದ ಇರಾಕೋಡಿಯ ಮಸೀದಿಯ ದಫನ ಸ್ಥಳದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು.

ನೆರೆದಿದ್ದ ಜನರು ಅಬ್ದುಲ್‌ ರಹ್ಮಾನ್‌ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಪ್ರಾಥಮಿಕ ವಿಧಿ ವಿಧಾನ ಪೂರೈಸಿದ ಬಳಿಕ ಮೃತದೇಹವನ್ನು ಅವರ ಮನೆಗೆ ಕೊಂಡೊಯ್ಯಲಾಯಿತು. ಈ ವೇಳೆ ಸಾವಿರಾರು ಮಂದಿ ಭಾಗವಹಿಸಿದ್ದರು. ಅಬ್ದುಲ್ ರಹ್ಮಾನ್‌ರ ತಂದೆ, ತಾಯಿ, ಸಹೋದರಿ, ಪತ್ನಿ ಹಾಗೂ ಮಕ್ಕಳು ಸಂಬಂಧಿಕರು ಮಂದಿ ಅಂತಿಮ ದರ್ಶನ ಪಡೆದರು. ಈ ವೇಳೆ ಮನೆ ಮಂದಿ ಹಾಗೂ ಕುಟುಂಬಿಕರ ಆಕ್ರಂದನ ಮುಗಿಲುಮುಟ್ಟಿತ್ತು.

error: Content is protected !!