ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಅಭಿನಯದ ಚಿತ್ರ ʻಜಾವಾʼ ಚಿತ್ರ ಸೆಟ್ಟೇರಿದ್ದು, ಇದರ ಪಾತ್ರದಲ್ಲಿ ಅವರು ಹಿಂದೆಂದೂ ಕಾಣದ ರೀತಿ ಬೋಲ್ಡಾವತಾರ ತಾಳಿದ್ದಾರೆ. ರಾಗಿಣಿ ತನ್ನ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಗೊಳಿಸಿ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿಬಿಟ್ಟಿದ್ದಾರೆ.
ಈ ಚಿತ್ರದಲ್ಲಿ ರಾಜ್ ವರ್ಧನ್ ಜೊತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದು, ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ. ದೇವಾ ಚಕ್ರವರ್ತಿ ನಿರ್ದೇಶನದ, ಜಾವಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದು, ಉತ್ತಮ ಕಥಾಹಂದರದೊಂದಿಗೆ ಮಾಸ್ ಪ್ರಿಯರನ್ನು ಇಷ್ಟಪಡಿಸುವ ನಿರೀಕ್ಷೆಯಿದೆ ಎಂದು ರಾಗಿಣಿ ಹೇಳಿದ್ದಾರೆ.
ಜಾವಾದಲ್ಲಿ ರಾಗಿಣಿ ದ್ವಿವೇದಿಯದು ಪ್ರಮುಖ ಪಾತ್ರವಾಗಿದೆ. ಈ ಹಿಂದೆ ನೋಡಿಲ್ಲದ ಬೋಲ್ಡ್ ಅವತಾರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಪ್ರತಿ ಫ್ರೇಮ್‌ನಲ್ಲಿಯೂ ಕಮಾಂಡಿಂಗ್ ಮಾಡುವ ದಿಟ್ಟ ಮಹಿಳಾ ನಾಯಕಿಯಾಗಿದ್ದಾರೆ. ರಾಗಿಣಿ ಕೇವಲ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು R Queen ಆಗಿ ಹೊರಹೊಮ್ಮಲಿದ್ದಾರೆ ಎಂದು ನಿರ್ದೇಶಕ ದೇವಾ ತಿಳಿಸಿದರು. ಆಕೆಯ ಜನ್ಮದಿನದಂದೂ ಬಿಡುಗಡೆಯಾದ ಫಸ್ಟ್ ಲುಕ್ ಫೋಸ್ಟರ್ ನಲ್ಲಿ ಅವರಲ್ಲಿ ಇರುವ ಶಕ್ತಿ ಏನೆಂಬುದು ತೋರಿಸಿದೆ ಎಂದು ಅವರು ಹೇಳಿದರು.