ಹೊನ್ನಾವರ: ಕೊರೊನಾ ಏರಿಕೆಯ ಆತಂಕದ ಬೆನ್ನಲ್ಲೇ ಇದೀಗ ಮಂಗನ ಕಾಯಿಲೆ ವಕ್ಕರಿಸಿದ್ದು, ಇದಕ್ಕೆ ಮತ್ತೊಬ್ಬ ವ್ಯಕ್ತಿ ಇಂದು ಬಲಿಯಾಗಿದ್ದಾರೆ.
ಹಳದಿಪುರ ಮೀನು ಮಾರುಕಟ್ಟೆ ಬಳಿಯ ನಿವಾಸಿ, ನಾಣಿ ಹಮ್ಮಣ ಗೌಡ (74) ಮೃತಪಟ್ಟ ದುರ್ದೈವಿ. ಕೆಲವು ದಿನಗಳ ಹಿಂದೆ ಇದೇ ಕಾಯಿಲೆಗೆ ಮೃತಪಟ್ಟಿದ್ದರು. ಕೆ.ಎಫ್.ಡಿ. ಗೆ ಜಿಲ್ಲೆಯಲ್ಲಿ 2ನೇ ಬಲಿಯಾದ ಘಟನೆ ಮೇ 24ರ ಶನಿವಾರ ನಡೆದಿದೆ.
ನಾಣಿ ಹಮ್ಮಣ ಗೌಡರು ಮಣಿಪಾಲದ ಆಸ್ಪತ್ರೆಯಲ್ಲಿ (ಮಂಗಲ ಕಾಯಿಲೆ Kyasanur Forest Disease -KFD) ಚಿಕಿತ್ಸೆ ಪಡೆಯುತ್ತಿದ್ದರು. ಮೇ 9ರಂದು ಇವರಲ್ಲಿ ಕೆಎಫ್‌ಡಿ ಕಾಣಿಸಿದ್ದು, ಆರೋಗ್ಯಾಧಿಕಾರಿಗಳು ಅಂದೇ ಅವರನ್ನು ತಾಲೂಕು ಆಸ್ಪತ್ರೆಯಿಂದ ಮಣಿಪಾಲ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಕಿಡ್ನಿ ಹಾಗೂ ಲಿವರ್ ಸಂಬಂಧಿತ ಕಾಯಿಲೆಗಳಿಂದ ಮರಣವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಜನಕಡ್ಕಲ ಕಡೆ ಒಣ ಎಲೆಗಳನ್ನು ಸಂಗ್ರಹಿಸುವ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಂಗನಕಾಯಿಲೆಗೆ ತುತ್ತಾಗಿರಬಹುದೆಂದು ಶಂಕಿಸಲಾಗಿದೆ.