ಪಿಲಿಕುಳಕ್ಕೆ ಲೋಕಾಯುಕ್ತ ದಾಳಿ: ಆಡಳಿತದಲ್ಲಿ ಲೋಪದೋಷ ಪತ್ತೆ!

ಮಂಗಳೂರು: ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ ಹಾಗು ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ. ಎನ್ ರವರು ಸಿಬ್ಬಂದಿಯವರೊಂದಿಗೆ ಮಂಗಳೂರಿನ ಪಿಲಿಕುಳಕ್ಕೆ ದಾಳಿ ನಡೆಸಿ ಪರಿಶೀಲಿಸಿದ್ದು. ಪರಿಶೀಲನೆ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದು, ಮುಖ್ಯವಾಗಿ ಮೃಗಾಲಯದಿಂದ ಹೆಚ್ಚಿನ ಆದಾಯ ಬರುತ್ತಿದ್ದರು ಕೂಡ ಪ್ರಾಧಿಕಾರವು ಮೃಗಾಲಯದ ಏಳಿಗೆಗೆ ಹಣವನ್ನು ವೆಚ್ಚ ಮಾಡುತ್ತಿರುವುದು ಕಂಡುಬರುವುದಿಲ್ಲ. ಅಲ್ಲಿನ ಸಿಬ್ಬಂದಿಯವರಿಗೆ ಕಡಿಮೆ ವೇತನ ನೀಡುತ್ತಿದ್ದು, ಯಾವುದೇ ಆರೋಗ್ಯ ಸೌಲಭ್ಯವನ್ನು ಒದಗಿಸದೆ ಇರುವುದು ಕಂಡುಬರುತ್ತದೆ.ಮೃಗಾಲಯದ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆದೇಶವಾಗಿದ್ದರು ಕೂಡ ಪ್ರಾಧಿಕಾರವು ಈ ವರೆಗೂ ಹಸ್ತಾಂತರಿಸದೆ ವಿಳಂಬ ಧೋರಣೆ ಮಾಡಿರುವುದು ಕಂಡುಬರುತ್ತದೆ.

ಲೀಸ್ ಗೆ ಕೊಟ್ಟ ಕೆಲವು ಸಂಸ್ಥೆಗಳಿಂದ ಪ್ರಾಧಿಕಾರವು ತೆರಿಗೆ ಹಣ ಸಂಗ್ರಹಿಸದೆ ಇರುವುದು ಕಂಡುಬರುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ಕಂಡುಬರುತ್ತಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ವರದಿ ನಿವೇದಿಸಲಾಗುವುದು ಎಂಬುದಾಗಿ ಕುಮಾರಚಂದ್ರ ಪೊಲೀಸ್ ಅಧೀಕ್ಷಕರು(ಪ್ರಭಾರ) ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ, ಮಂಗಳೂರುರವರು ತಿಳಿಸಿರುತ್ತಾರೆ.

error: Content is protected !!