ಕಾನಡ್ಕದಲ್ಲಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ಪದವು ಸೆಂಟ್ರಲ್ ವಾರ್ಡಿನ ಪದವು ಕಾನಡ್ಕ ಡಾಲ್ಫಿ ಡಿ’ಸೋಜಾ ಮನೆ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಯು ಸುಮಾರು 25 ಲಕ್ಷ ರೂ. ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಇದು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರುಗೊಂಡ ಅನುದಾನವಾಗಿದ್ದು ಪ್ರಸ್ತುತ ಈಗಿನ ಸರ್ಕಾರದ ಬಳಿ ಸತತವಾಗಿ ಮನವಿ ಮಾಡಿದ ನಂತರ ತಡೆ ಹಿಡಿಯಲಾಗಿದ್ದ ಅನುದಾನ ಮತ್ತೆ ಬಿಡುಗಡೆಗೊಂಡಿದೆ. ಆ ಮೂಲಕ ಶೀಘ್ರದಲ್ಲಿ ಕಾಮಗಾರಿಯು ಮುಗಿದು ಸ್ಥಳೀಯರಿಗೆ ಉಪಯೋಗವಾಗಲಿದೆ ಎಂದರು.

ನಿಕಟ ಪೂರ್ವ ಮ.ನ.ಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರು, ಜಯಕುಮಾರ್ , ನವೀನ್ ಶೆಣೈ, ಮಾಧವ ಭಟ್, ಸುನಿಲ್ ಕಾರ್ಮಿಕ ಕಾಲೋನಿ, ಡೋಲ್ಪಿ ಡಿಸೋಜ, ರಮೇಶ್, ಕರ್ಣ, ನಟರಾಜ್ ಆಳ್ವ, ನೀರಜ್ ಕಕ್ಕೆಬೆಟ್ಟು, ಪ್ರವೀಣ್ ಆಚಾರಿ, ಗುರು, ಲೆಸ್ಲಿ, ಮೆಲ್ವಿ, ವಾಲ್ಟಿ, ಫ್ರ್ಯಾಂಕ್ಲಿ, ಫಿಲಿಪ್, ಪ್ರೀತಮ್, ಮಣಿ ನೀತಿನಗರ, ವಾಜಿ, ಜೋಸಿ ಸಿಕ್ವೆರ ಮೊದಲಾದವರು ಉಪಸ್ಥಿತರಿದ್ದರು.

error: Content is protected !!