ನವದೆಹಲಿ: ಸಿ.ಐ.ಎಸ್.ಎಫ್ ಸಿಬ್ಬಂದಿ ಗೀತಾ ಸಮೋಟಾ ಅವರು ಮೌಂಟ್ ಎವರೆಸ್ಟ್ ಶಿಖರದ ತುತ್ತತುದಿ ತಲುಪಿದ ಕೇಂದ್ರೀಯ ಭದ್ರತಾ ಪಡೆ (ಸಿ.ಐ.ಎಸ್.ಎಫ್) ಯ ಪ್ರಪ್ರಥಮ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಗತ್ತಿನ ಅತೀ ಎತ್ತರದ ಶಿಖರವೇರಿದ ಅವರು ಭಾರತದ ತಿರಂಗ ಹಾರಿಸಿ ಸಂಭ್ರಮಿಸಿದರು.
8,849 ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಶಿಖರವನ್ನು ಮೇ 19 ರ ಬೆಳಿಗ್ಗೆ ಗೀತಾ ಅವರು ತಲುಪಿದ್ದಾರೆ. ಶಿಖರವನ್ನು ಏರುವ ಮೂಲಕ ಭಾರತೀಯ ಮಹಿಳೆಯರಿಗೆ ಮತ್ತು ಸಿಐಎಸ್‌ಎಫ್‌ಗೆ ಕೀರ್ತಿ ತಂದಿದ್ದಾರೆ. ಅಪರೂಪದ ಕ್ಷಣಗಳ ವಿಡಿಯೋವನ್ನು ಸಿಐಎಸ್ ಎಫ್ ತಮ್ಮ ಎಕ್ಸ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ.
ಗೀತಾ ಸಮೋಟಾ ಅವರ ಸಾಧನೆಯನ್ನು ಸಿಐಎಸ್ ಎಫ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಂಭ್ರಮಿಸಿದ್ದಾರೆ. ಕೈಗಾರಿಕಾ ಭದ್ರತಾ ಪಡೆ ಮುಂದಿನ ವರ್ಷ ಮೌಂಟ್ ಎವರೆಸ್ಟ್ ಗೆ ಪ್ರತ್ಯೇಕ ತಂಡವನ್ನೇ ಕಳುಹಿಸಲು ನಿರ್ಧರಿಸಿದ್ದು, ಇದಕ್ಕೂ ಮುನ್ನವೇ ತಮ್ಮದೇ ಪಡೆಯ ಮಹಿಳಾ ಸಬ್ ಸಬ್ ಇನ್ಸ್‌ಪೆಕ್ಟರ್ ಈ ಸಾಧನೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸಂತೋಷವನ್ನು ವ್ಯಕ್ತಪಡಿಸಿದರು.