ಜೈಪುರ: ಬರೋಬ್ಬರಿ 25 ಮಂದಿಗೆ ಮದುವೆ ಹೆಸರಲ್ಲಿ ವಂಚಿಸಿ, ಲಕ್ಷಾಂತರ ದೋಚಿ, 26ನೇ ಮದುವೆಗೆ ಸ್ಕೆಚ್ ಹಾಕುತ್ತಿದ್ದ 32ರ ಆಂಟಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಅಂದ ಹಾಗೆ ಈ ಘಟನೆ ಜೈಪುರದ ಸವಾಯಿ ಮಾಧೋಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‘ಲೂಟಿಕೋರ ದುಲ್ಹನ್’ ಎಂದೇ ಕುಖ್ಯಾತಿ ಪಡೆದಿರುವ ಅನುರಾಧ ಪಾಸ್ವಾನ್, 25 ಅಮಾಯಕ ವರರನ್ನು ವಂಚಿಸಿ ಲಕ್ಷಾಂತರ ಮೌಲ್ಯದ ಆಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದವಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಅನುರಾಧ ಹಾಗೂ ಆಕೆಯ ಸಹೋದರರು ಕೂಡ ನಿರುದ್ಯೋಗಿಗಳಾಗಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ, ಅನುರಾಧ ವಂಚನೆ ದಾರಿ ಆಯ್ಕೆ ಮಾಡಿಕೊಂಡಳು. 32 ವಯಸ್ಸಿನ ಈಕೆ ವಧುವಿನಂತೆ ನಟಿಸಿ ಅಮಾಯಕ ವರರನ್ನು ವಂಚಿಸುತ್ತಿದ್ದಳು. ಗ್ ಸದಸ್ಯರು ಈಕೆಯ ಫೋಟೋಗಳು ಮತ್ತು ಪ್ರೊಫೈಲ್ ಅನ್ನು ವರರಿಗೆ ತೋರಿಸಿ ಮದುವೆಗೆ ಗೊತ್ತು ಮಾಡುತ್ತಿದ್ದರು. ವಿವಾಹ ಒಪ್ಪಿಗೆ ಪತ್ರವನ್ನು ತಯಾರಿಸಲಾಗುತ್ತದೆ. ವಧು-ವರ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ವಿಧಿವಿಧಾನಗಳ ಪ್ರಕಾರ ಮದುವೆಯಾಗುತ್ತಿದ್ದರು. ನಂತರ ಈಕೆಯ ಅಸಲಿ ಆಟ ಪ್ರಾರಂಭವಾಗುತ್ತಿತ್ತು.
ಗಂಡನ ಮನೆಯಲ್ಲಿ ಎಲ್ಲರೊಟ್ಟಿಗೂ ಅನ್ಯೋನ್ಯವಾಗಿರುವಂತೆ ನಟಿಸುತ್ತಿದ್ದಳು. ಮುಗ್ಧಳಂತೆ ವರ್ತಿಸಿ ಎಲ್ಲರನ್ನೂ ಮರಳು ಮಾಡುತ್ತಿದ್ದಳು. ಹೀಗೆ, ಮದುವೆಯಾದ ಕೆಲವೇ ದಿನಗಳಲ್ಲಿ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಪತಿ ಕುಟುಂಬದವರಿಗೆ ಕೊಡುತ್ತಿದ್ದಳು. ನಂತರ ಮನೆಯಲ್ಲಿ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದಳು.
ಈ ಬಗ್ಗೆ ವಂಚನೆಗೆ ಒಳಗಾದ ವರರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.