ಆಪರೇಷನ್ ದರ್ರಾ-ಎ-ಬೋಲನ್ 2.0
ನವದೆಹಲಿ: ʻಆಪರೇಷನ್ ದರ್ರಾ-ಎ-ಬೋಲನ್ 2.0′ ಮೂಲಕ ಪಾಕಿಸ್ತಾನ 214 ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೊಂಡಿದ್ದು, ಈ ಕುರಿತಂತೆ ಅದು ವಿಡಿಯೋ ಬಿಡುಗಡೆ ಮಾಡಿದೆ.
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮಾರ್ಚ್ 11 ರಂದು ಬೋಲನ್‌ನಲ್ಲಿ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿರುವ ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯ ವಿಡಿಯೋ ಇದಾಗಿದೆ. ಬಿಎಲ್‌ಎ ಮಾಧ್ಯಮ ವಿಭಾಗ ಹಕ್ಕಲ್ ಗುಂಪು ಇದನ್ನು ʻಆಪರೇಷನ್ ದರ್ರಾ-ಎ-ಬೋಲನ್ 2.0′ ಎಂದು ಕರೆದುಕೊಂಡಿದೆ.
ಸುಮಾರು 10 ನಿಮಿಷಗಳ ವೀಡಿಯೊದಲ್ಲಿ, ಭಾರೀ ಶಸ್ತ್ರಸಜ್ಜಿತ ಬಿಎಲ್‌ಎ ಹೋರಾಟಗಾರರು ಜಾಫರ್ ಎಕ್ಸ್‌ಪ್ರೆಸ್‌ಗೆ ಹೊಂಚು ಹಾಕಿ, ಸ್ಫೋಟ ನಡೆಸಿದ್ದಲ್ಲದೆ ಗುಂಡಿನ ದಾಳಿ ಮಾಡಿರುವುದು ಮತ್ತು ಡ್ರೋನ್ ಕಣ್ಗಾವಲು ದೃಶ್ಯಗಳನ್ನು ಕಾಣಬಹುದು.
ಕಾರ್ಯಾಚರಣೆಯಲ್ಲಿ 214 ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನು ತಟಸ್ಥಗೊಳಿಸಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ, ಅಲ್ಲದೆ ರೈಲಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅಂತರರಾಷ್ಟ್ರೀಯ ಯುದ್ಧ ಕಾನೂನುಗಳಿಗೆ ಅನುಸಾರವಾಗಿ ಇದನ್ನೆಲ್ಲಾ ಮಾಡಲಾಗಿದೆ ಎಂದು ಗುಂಪು ಹೇಳಿಕೊಂಡಿದೆ.
ಮಾರ್ಚ್ 11 ರ ದಾಳಿಯನ್ನು ಬಿಎಲ್‌ಎ ಇದೀಗ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ, ಇದು ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನಿ ಪಡೆಗಳಿಗೆ ನೀಡಿದ ಮಾರಕ ಹೊಡೆತಗಳಲ್ಲಿ ಪೈಕಿ ಒಂದಾಗಿದೆ.
ಪಾಕಿಸ್ತಾನ ಸೇನೆಯು ಬಿಡುಗಡೆಗೊಂಡ ಈ ವೀಡಿಯೋದ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನ ಸೇನೆಯ ಅತಿಕ್ರಮಣ ಬಲೂಚಿಸ್ತಾನದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರಕ್ಕೆ ಸ್ಪಷ್ಟ ಮತ್ತು ನೇರ ಎಚ್ಚರಿಕೆ ನೀಡಲು ಈ ಹೊಸ ವೀಡಿಯೊವನ್ನು ಬಹಿರಂಗಪಡಿಸಲಾಗಿದೆ.
ಪಾಕಿಸ್ತಾನಿಗಳು ಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಸೇನಾ ನಿಯಂತ್ರಣದ ಮೂಲಕ ಸ್ಥಳೀಯರ ಧ್ವನಿಯನ್ನು ದಮನಿಸಲಾಗುತ್ತಿದೆ ಎಂದು ಬಿಎಲ್‌ಎ ಬಹಳ ಹಿಂದಿನಿಂದಲೂ ಆರೋಪಿಸುತ್ತಾ ಬರುತ್ತಿದೆ.
For Video Click Here