ರತ್ನಗಿರಿ: ಸೇತುವೆಯಿಂದ ನದಿಗೆ ಕಾರು ಉರುಳಿ 100 ಅಡಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಚಾಲಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮುಂಜಾನೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜಗಬುಡಿ ಎಂಬಲ್ಲಿ ಸಂಭವಿಸಿದೆ.
ಮುಂಬೈ-ಗೋವಾ ಹೆದ್ದಾರಿಯಲ್ಲಿ ಮುಂಬೈನಿಂದ ದೇವ್ರುಖ್‌ಗೆ ಗಂಟೆಗೆ 160 ಕಿ.ಮೀ. ಸ್ಪೀಡಲ್ಲಿ ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರನ್ನು ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿ, ಆ ನಂತರ ಶವಗಳನ್ನು ವಾಹನದಿಂದ ಹೊರತೆಗೆಯಲಾಯಿತು.
ಸೋಮವಾರ ರಾತ್ರಿ ಮುಂಬೈನ ನಲಸೋಪರಾ ಪೂರ್ವದಲ್ಲಿರುವ ತುಲಿಂಜ್ ಪೊಲೀಸ್ ಠಾಣೆಯ ಮುಂದೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಂಬ್ಯುಲೆನ್ಸ್ ಈ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತ್ತು, ಸೈರನ್ ಹಾಕಿದ್ದರೂ ದಾರಿಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಆಂಬ್ಯುಲೆನ್ಸ್ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿಯೇ ಅಲ್ಲಿಯೇ ಇರಬೇಕಾಯಿತು.
ನದಿ ಒಣಗಿ ಹೋಗಿತ್ತು, ಕಾರು ಬಂಡೆಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.