ಬಂಟ್ವಾಳ :ಪಾಣೆಮಂಗಳೂರಿನ ನೆಹರೂನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು ಓವರ್ ಟೇಕ್ ಭರದಲ್ಲಿ ಸ್ಕೂಟರ್ ರೊಂದಕ್ಕೆ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಮಂಗಳೂರು ನಿವಾಸಿ ಅಲಿಸ್ಟರ್ ಡಿಸೋಜ(24) ಮೃತಪಟ್ಟವರು. ಅವರು ವಿಟ್ಲದಲ್ಲಿ ನಡೆದ ಗೃಹಪ್ರವೇಶದಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ನಡೆದಿದೆ.
ಮಂಗಳೂರು ಭಾಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಅಂಬಾರಿ ಬಸ್ಸು ನೆಹರೂನಗರದಲ್ಲಿ ಟೆಂಪೊ ಟ್ರಾವೆಲರ್ ಅನ್ನು ಓವರ್ ಟೇಕ್ ಮಾಡುವ ಪ್ರಯತ್ನದಲ್ಲಿ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ.
ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.