ಸುರತ್ಕಲ್: ನಗರದ ಹೊರವಲಯದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾವೂರು ದೇವಸ್ಥಾನದ ಜಳಕದ ಕರೆಯ ಪರಿಸರದಲ್ಲಿ ಸ್ಥಳೀಯ ಕಾಲೇಜ್ ವಿದ್ಯಾರ್ಥಿಗಳು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಕಾವೂರು ಕೆರೆಯನ್ನು ಕೆಲವರ್ಷಗಳ ಹಿಂದೆ ಶುಚಿಗೊಳಿಸಿ ಕೆರೆಯ ಸುತ್ತಲೂ ಜನರಿಗೆ ವಾಯುವಿಹಾರಕ್ಕೆ ಯೋಗ್ಯವಾಗಿ ಮಾಡಿರುತ್ತಾರೆ. ಆದರೆ ಅಲ್ಲಿ ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾಗಿ ತಡರಾತ್ರಿ 2 ಗಂಟೆಯ ವರೆಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಜೋಡಿಯಾಗಿ ಬಂದು ಅಲ್ಲಿರುವ ಕಲ್ಲು ಬೆಂಚಿನಲ್ಲಿ ಕುಳಿತು ಪರಸ್ಪರ ಅಪ್ಪಿ ಹಿಡಿದುಕೊಂಡು ಏನೇನೋ ಮಾಡುತ್ತಿರುತ್ತಾರೆ. ಕೆಲವೊಬ್ಬರು ಪ್ಯಾಂಟ್ ಜಾರಿಸಿ ತೀರಾ ಅಸಭ್ಯವಾಗಿ ಇರುವುದನ್ನು ಗಮನಿಸಲಾಗಿದೆ. ಇದು ಅಲ್ಲಿ ವಾಯು ವಿಹಾರಕ್ಕೆ ಬರುವ ಸಭ್ಯ ನಾಗರಿಕರಿಗೆ ಅಸಹ್ಯವನ್ನು ಉಂಟು ಮಾಡುತ್ತಿದೆ. ರಾತ್ರಿ ಹೊತ್ತಿನಲ್ಲಂತೂ ಅಲ್ಲಿ ಎಲ್ಲವೂ ಕಣ್ಣೆದುರು ನಡೆದರೂ ಕಣ್ಣಿದ್ದು ಕುರುಡರಂತೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅನ್ಯಕೋಮಿನ ಬಜಪೆ ಕಡೆಯ ಕೆಲವೊಂದು ಯುವಕರು ಯುವತಿಯರನ್ನು ಕರೆದುಕೊಂಡು ಬಂದು ರಾತ್ರಿ ಹೊತ್ತಿನಲ್ಲಿ ಮಜಾ ಉಡಾಯಿಸುತ್ತಿದ್ದು ಈ ವಿಚಾರ ಕಾವೂರು ಪೊಲೀಸರಿಗೆ ತಿಳಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮುಂದೆ ಒಂದು ದಿನ ಇಲ್ಲಿ ಈ ವಿಚಾರಕ್ಕೆ ಗಲಾಟೆಗಳು ಸಂಭವಿಸುವ ಮುಂಚೆ ಎಚ್ಚೆತ್ತುಕೊಂಡು ಪೊಲೀಸರು ಗಸ್ತು ತಿರುಗುವುದು. ಹಾಗೂ ಅಲ್ಲಿ ಅಸಭ್ಯ ವರ್ತನೆಗೆ ಅವಕಾಶ ಇಲ್ಲ ಎಂಬ ಬಗ್ಗೆ ಫಲಕಗಳನ್ನು ಅಳವಡಿಸುವುದು ಮಾಡಿದಲ್ಲಿ ಉತ್ತಮ. ಇಲ್ಲದಿದ್ದಲ್ಲಿ ಹೆಚ್ಚು ಸಮಯ ಕಾಯದೇ ಮುಸುಕು ಹಾಕಿ ಹೊಡೆಯುವ ಕಾರ್ಯವನ್ನು ನಾಗರಿಕರೇ ಮಾಡಬೇಕಾದೀತು ಎಂದು ದೂರಿನಲ್ಲಿ ತಿಳಿಸಿದ್ದಾರೆ.