ʻNext You ́: ಪುನೀತ್‌ ಕೆರೆಹಳ್ಳಿಗೆ ಜೀವಬೆದರಿಕೆ

ಮೈಸೂರು: ʻಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ, Next You ́ ಎಂದು  ಪುನೀತ್ ಕೆರೆಹಳ್ಳಿಗೆ ದುಷ್ಕರ್ಮಿಗಳು ಜೀವ ಬೆದರಿಕೆವೊಡ್ಡಿದ್ದಾರೆ. ಈ ಕುರಿತಂತೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಪುನೀತ್‌ ಕೆರೆಹಳ್ಳಿಗೆ ವಾಟ್ಸ್ಯಾಪ್ ಕರೆ ಮಾಡಿದ ಕಿಡಿಗೇಡಿಗಳು ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ನಿನ್ನನ್ನು ಮುಗಿಸುತ್ತೇವೆ Next You ಎಂದು ಬೆದರಿಕೆ ಕರೆ ಬಂದಿದ್ದು, ಕೋರ್ಟ್ ಅನುಮತಿ ಪಡೆದು ಅಕ್ರಮ ಖಾನ್ ಎಂಬುವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಇತ್ತೀಚೆಗೆ ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ, ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಹಿಂದೂ ಮುಖಂಡರಾದ ಭರತ್ ಕುಮ್ಡೇಲ್ ಹಾಗೂ ಶರಣ್‌ ಪಂಪ್‌ವೆಲ್‌ ಗೂ ಇದೇ ರೀತಿ ಬೆದರಿಕೆಗಳು ಬಂದಿದ್ದವು.

error: Content is protected !!