ಸರಿಯಾದ ಸಿಗ್ನಲ್ ವ್ಯವಸ್ಥೆಯಿಲ್ಲದ ಸ್ಮಾರ್ಟ್‌ ಸಿಟಿ: ಟ್ರಾಫಿಕ್‌ ಜಾಮ್‌ನಿಂದ ಜನರು ಪರದಾಟ

ಮಂಗಳೂರು: ನಗರದ ಸೆಂಟ್ರಲ್‌ ರೈಲ್ವೇ ನಿಲ್ದಾಣದಿಂದ ಅತ್ತಾವರ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಅಸಂಖ್ಯಾತ ಜನರು ಓಡಾಡುವ ಪಥದಲ್ಲೇ ಟ್ರಾಫಿಕ್ ಸಿಗ್ನಲ್ ಅಥವಾ ಟ್ರಾಫಿಕ್ ಪೊಲೀಸ್ ಅಳವಡಿಕರ ಇಲ್ಲದೆ ಅಪಘಾತಗಳಿಗೆ ಅಹ್ವಾನ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಅಪಘಾತದಿಂದ ಜೀವ ಬಲಿ ಪಡೆದ ನಂತರವೇ ಜನಪ್ರತಿನಿಧಿಗಳು ಎಚ್ಚರಗೊಳ್ಳುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಸರಿಯಾದ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು ನಿಜವಾಗಿಯೂ ಜಿಲ್ಲಾಡಳಿತದ, ಜನ ಪ್ರತಿನಿಧಿಗಳ ನಿರ್ಲಕ್ಷ್ಯವೇ ಸರಿ. ರಸ್ತೆ ಕಾಮಗಾರಿ, ರಸ್ತೆ ಅಭಿವೃದ್ಧಿಗೆ ಅನುದಾನ ಹಾಕುವ ಹೊರತಾಗಿ ಅಪಘಾತ ಸಂಭವನೀಯ ರಸ್ತೆಗಳಲ್ಲಿ ಒಂದು ಟ್ರಾಫಿಕ್ ಸಿಗ್ನಲ್‌ ಅಳವಡಿಕೆಯತ್ತ ಅಧಿಕಾರಿಗಳು ಗಮನ ಹರಿಸುವ ಅಗತ್ಯವಿದೆ.

error: Content is protected !!