ಮೇ 15, 16ರಂದು ಯೆನೆಪೋಯ ವಿವಿಯಲ್ಲಿ ʻಐಕಾನ್‌ ಯೂತ್‌- 2025ʼ: ದೇಶ-ವಿದೇಶಗಳ ಪ್ರತಿನಿಧಿಗಳು ಭಾಗಿ

ಮಂಗಳೂರು: ಇತ್ತೀಚೆಗೆ ಮಾಂಗಳೂರಿನ ಯೆನೆಪೋಯಾ (ಘೋಷಿತ ವಿಶ್ವವಿದ್ಯಾನಿಲಯ) ನಲ್ಲಿ ನಡೆಯಲಿರುವ ICON YOUTH 2025 – ಅಂತಾರಾಷ್ಟ್ರೀಯ ಯುವ ಸಮಾವೇಶದ ಪತ್ರಿಕಾ ಸಭೆಯು ಪ್ರಖ್ಯಾತಿಯೊಂದಿಗೆ ಘೋಷಿಸಲಾಗಿತ್ತು. ಈ ಮಹತ್ವದ ಕಾರ್ಯಕ್ರಮವನ್ನು ಭಾರತದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಯೆನೆಪೋಯಾ (ಘೋಷಿತ ವಿಶ್ವವಿದ್ಯಾನಿಲಯ) ಸಹಯೋಗದೊಂದಿಗೆ ಮೇ 15 ಮತ್ತು 16, 2025 ರಂದು ವಿವಿ ಆವರಣದಲ್ಲಿ ಆಯೋಜಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಕುರಿತಂತೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನಗಳ ಬೃಹತ್ ಕಾರ್ಯಕ್ರಮವು ದೇಶದ 20 ರಾಜ್ಯಗಳು ಮಾತ್ರವಲ್ಲದೆ ವಿದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನಮ್ಮ ದೇಶದ ಅಸ್ಸಾಂ, ರಾಜಸ್ಥಾನ, ಪಂಜಾಬ್, ಕೇರಳ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಪುಡುಚೇರಿ, ಜಾರ್ಖಂಡ್, ಉತ್ತರಪ್ರದೇಶ, ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ ನಿಂದ ಹಾಗೂ ವಿದೇಶ ನೈಜೀರಿಯಾ, ನೇಪಾಳ ಮತ್ತು ಟಿಬೆಟ್ ದೇಶಗಳಿಂದ ಆಗಮಿಸುವ 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳನ್ನು ಸೇರಿಸಿ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಶ್ರೀಲಂಕಾ, ರಷ್ಯಾ, ನೈಜೀರಿಯಾ ಮತ್ತು ಥೈಲ್ಯಾಂಡ್‌ನಿಂದ ಅಂತರರಾಷ್ಟ್ರೀಯ ವಕ್ತಾರರು ಕೂಡಾ ಪಾಲ್ಗೊಳ್ಳಲಿದ್ದಾರೆ ಎಂದರು.

ಮೇ 15 ರಂದು ಬೆಳಿಗ್ಗೆ 10:00 ಗಂಟೆಗೆ ಯೆನೆಪೋಯಾ ಯೆಂಡುರನ್ಸ್ ಝನ್‌ನಲ್ಲಿ ಸಮಾರಂಭದ ಅಧಿಕೃತ ಉದ್ಘಾಟನೆ ನಡೆಯಲಿದ್ದು, ಡಾ. ಸರಾ ಜಯಲ್ ಸಾವಿ, ಅಂತರರಾಷ್ಟ್ರೀಯ ಸಹಯೋಗ ನಿರ್ದೇಶಕಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ, ಉಪನ್ಯಾಸವನ್ನು ಯೆನೆಪೋಯಾ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ. ವಿಜಯಕುಮಾರ್ ಅವರು ನೀಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಯೆನೆಪೋಯಾ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಯೆನೆಪೋಯಾ ಅಬ್ದುಲ್ಲಾ ಕುನ್ನಿ ವಹಿಸಲಿದ್ದಾರೆ ಎಂದರು.

‘ಆವಿಷ್ಕಾರಾತ್ಮಕ ಗಡಿಗಳತ್ತ – ಪರಿವರ್ತನೆಯ ಸ್ಮಾರ್ಟ್ ಅಪ್‌ಗಳಿಗೆ ಐಡಿಯಾಥಾನ್” ಎಂಬಥೀಮ್ಮಡಿ, 145 ವಿದ್ಯಾರ್ಥಿಗಳು ತಮ್ಮ ನವೀನ ಕಲ್ಪನೆಗಳನ್ನು ಪೋಸ್ಟರ್ ಪ್ರದರ್ಶನದ ಮೂಲಕ ನೀಡಲಿದ್ದಾರೆ. ಈ ಸ್ಪರ್ಧೆಯು ಯುವ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಸಮಾಜಮುಖಿ ಆವಿಷ್ಕಾರಗಳಿಗೆ ವೇದಿಕೆಯಾಗಲಿದೆ ಎಂದರು

ಈ ಯುವ ಸಮಾವೇಶದಲಿ, ದೇಶಿ ಹಾಗೂ ಅಂತರರಾಷ್ಟ್ರೀಯ ಮಟ್ಟದ 18 ವಕ್ತಾರರು ಮತ್ತು 4 ಮೋಡೆರೇಟರ್‌ಗಳು ಪಾಲ್ಗೊಳ್ಳಲಿದ್ದಾರೆ, ಮುಂದಿನ ಪೀಳಿಗೆಯ ನೇತೃತ್ವವನ್ನು ಬೆಳೆಸುವ ಉದ್ದೇಶದಿಂದ ವಿವಿಧ ವಿಚಾರವಂತ ಚರ್ಚೆಗಳು ನಡೆಯಲಿದೆ.
ಯುವ ಉದ್ಯಮಶೀಲತೆ ಮತ್ತು ಆವಿಷ್ಕಾರ, ಅಭಿವೃದ್ಧಿಯ ಹೃದಯದಲ್ಲಿ ಮಹಿಳೆಯರು, ಬಾಹ್ಯಾಕಾಶ ಸಂಶೋಧನೆ ಮತ್ತು ಯುವ ಸಮುದಾಯ ,ಶಾಶ್ವತ ಭವಿಷ್ಯಕ್ಕಾಗಿ ಯುವ ಶಕ್ತಿಯ ಸಬಲೀಕರಣ, ವಿಕಸಿತ ಭಾರತಕ್ಕಾಗಿ ಯುವ ಶಕ್ತಿ, ಡಿಜಿಟಲ್ ಯುಗದಲ್ಲಿನ ಯುವಕರು,
ಸಮುದಾಯ ಪರಿವರ್ತನೆಗೆ ಯುವಕರು ಪ್ರೇರಕ ಶಕ್ತಿ ಎಂಬ ವಿಷಯದ ಕುರಿತಂತೆ ಚರ್ಚೆಗಳು ನಡೆಯಲಿದೆ.
ಮೇ 16 ರಂದು ಸಮಾರಂಭದ ವಾಲೆಡಿಕ್ಷ್ಯರಿ (ಪೂಟ) ನಡೆಯಲಿದ್ದು, ರಣದೀಪ್ ಡಿ ಐಎಎಸ್, ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ಚೇತನ ಆರ್, ಐಪಿಎಸ್, ಆಯುಕ್ತ, ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ಸೆಲ್ಸನ್, ಕಾರ್ಯಕ್ರಮ ಸಲಹೆಗಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ, ಡಾ. ಪ್ರತಾಪ್ ಲಿಂಗಯ್ಯ ರಾಜ್ಯ NSS ಅಧಿಕಾರಿ, ಕರ್ನಾಟಕ ಸರ್ಕಾರ, ಕಾರ್ತಿಕೇಯನ್ ಮಧೀಶ್ ಪರಿಖ್, ಸಂಸ್ಥಾಪಕ ನಿರ್ದೇಶಕ, BRICKS Youth Alliance, ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕುಲಪತಿ ಡಾ. ಎಂ. ವಿಜಯಕುಮಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪೋಸ್ಟರ್ ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಈ ವೇಳೆ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ICON YOUTH 2025 ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ, ದೇಶ-ವಿದೇಶಗಳಿಂದ ಆಗಮಿಸುವ ಯುವ ಸಮುದಾಯಕ್ಕೆ ಉದ್ಯಮಶೀಲರು, ಯುವ ಸಾಧಕರು, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ನೀತಿ ನಿರ್ಧಾರಕರು, ಯುವ ನಾಯಕರೊಂದಿಗೆ ಸಂವಾದ ನಡೆಸಲು ಹಾಗೂ ನಾಯಕತ್ವ, ಆವಿಷ್ಕಾರ, ನೀತಿ ರೂಪಣೆ ಮತ್ತು ಸಬಲೀಕರಣ ವಿಷಯಗಳಲ್ಲಿ ತರಬೇತಿಗೆ ಅವಕಾಶ ನೀಡುವುದು ಆಗಿದೆ. ವಿವಿಧ ರಾಜ್ಯಗಳಿಂದ ಹಾಗೂ ದೇಶಗಳಿಂದ ಆಗಮಿಸುವ ಯುವ ಸಮುದಾಯಕ್ಕೆ ಪರಸ್ಪರ ಅನುಭವ ಹಂಚಿಕೊಳ್ಳುವ ವೇದಿಕೆ
ನಾಯಕತ್ವ, ಉದ್ಯಮಶೀಲತೆ, ನೀತಿ ರೂಪಣೆ ಹಾಗೂ ಸಾಮಾಜಿಕ ಬದ್ಧತೆಗೆ ಸಂಬಂಧಿಸಿದ ಕೌಶಲ್ಯಾಭಿವೃದ್ಧಿ, ಶಾಶ್ವತ ಅಭಿವೃದ್ಧಿ ಮತ್ತು ಡಿಜಿಟಲ್ ಆವಿಷ್ಕಾರಗಳ ಹಿನ್ನಲೆಯಲ್ಲಿ, ಅಂತಾರಾಷ್ಟ್ರೀಯ ಉದ್ದೇಶಗಳನ್ನು ತಿಳಿಯುವ ಅವಕಾಶ, “ವಿಕಸಿತ ಭಾರತ’ ನಿರ್ಮಾಣಕ್ಕೆ ಯುವ ಶಕ್ತಿಯ ನೇರ ತೊಡಗಿಸಿಕೊಳ್ಳುವ ಸಹಕಾರ ನೀಡುವುದು ಉದ್ದೇಶ ಎಂದು ವಿವರಿಸಿದರು.

ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಯುವ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ದೇಶದ ಅಭಿವೃದ್ಧಿಗೆ ಯುವ ಶಕ್ತಿಯ ಸದ್ವಿನಿಯೋಗದಲ್ಲಿ ನಿಸ್ವಾರ್ಥ ಶ್ರಮ ನೀಡುತ್ತಿದೆ. ಇವುಗಳಿಗೆ ಸಹಯೋಗಿಯಾಗಿ ಇರುವ ಯೆನೆಪೋಯಾ (ಘೋಷಿತ) ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ, ಆರೋಗ್ಯ ಹಾಗೂ ಸಮುದಾಯ ಸೇವೆಯ ಕೊಡುಗೆಗಳ ಮೂಲಕ ಮಾದರಿ ಎನಿಸಿದೆ ಎಂದು ತಿಳಿಸಿದರು.

error: Content is protected !!