ಲವ್ವರ್‌ ಜೊತೆಗಿನ ಹಸಿಬಿಸಿ ಫೋಟೋ ಹಂಚಿ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ʻಬಿಗ್ ಬಾಸ್’ ಬೆಡಗಿ

‘ಬಿಗ್ ಬಾಸ್’ ಖ್ಯಾತಿಯ ನಿಕ್ಕಿ ತಂಬೋಲಿ ತನ್ನ ಪ್ರಿಯಕರ ಅರ್ಬಾಜ್ ಪಟೇಲ್ ಜೊತೆಗಿನ ಪ್ರಣಯದ ಹಸಿಬಿಸಿ ಚಿತ್ರಗಳನ್ನು ಶೇರ್‌ ಮಾಡುವ ಮೂಲಕ ಇಂಟರ್ನೆಟ್‌ಗೆ ಬೆಂಕಿ ಹಚ್ಚಿಬಿಟ್ಟಿದ್ದಾರೆ. ಮಾಮೂಲಿಗಿಂತಲೂ ಚೆನ್ನಾಗಿ ಕಾಣುತ್ತಿರುವ ನಿಕ್ಕಿ ತಂಬೋಲಿಯ ಹಾಟ್‌ ಫೋಟೋಗಳನ್ನು ನೋಡಿ ಎದೆಬಡಿತ ಹೆಚ್ಚಿಸಿಕೊಂಡಿದ್ದಾರೆ.

Nikki Tamboli 7

ಇತ್ತೀಚೆಗೆ ಬಾಯ್‌ಫ್ರೆಂಡ್ ಅರ್ಬಾಜ್ ಪಟೇಲ್ ಜೊತೆ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಒಂದಕ್ಕೊಂದು ಸವಾಲೊಡ್ಡುವಂತಿದ್ದು, ಇಷ್ಟು ಬೋಲ್ಡಾಗಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

nikki tamboli
ನಿಕ್ಕಿ ತಂಬೋಲಿ ಇಂಟರ್‌ನೆಟ್‌ನಲ್ಲಿ ಹೊಸ ಫೋಟೋಶೂಟ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಗೆಳೆಯ ಅರ್ಬಾಜ್ ಜೊತೆ ಹಾಟ್ & ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಶೋಲ್ಡರ್ ಲೆಸ್ ಡ್ರೆಸ್‌ನಲ್ಲಿ ನಟಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ರೊಮ್ಯಾಂಟಿಕ್ ಆಗಿ ಇಬ್ಬರೂ ಪೋಸ್ ನೀಡುತ್ತಾ ವಿವಿಧ ಭಂಗಿಯಲ್ಲಿ ಫೋಟೋಶೂಟ್ ಮಾಡಿದ್ದಾರೆ.

Nikki Tamboli

ಪ್ರಿಯಕರ ಜೊತೆಗಿನ ನಟಿಯ ಫೋಟೋಶೂಟ್ ಕಂಡು ಸಭ್ಯ ಹುಡುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈ ತುಂಬಾ ಬಟ್ಟೆ ಹಾಕೋದನ್ನು ಕಲಿ, ನಿನ್ನ ಬೆಡ್‌ ರೂಂ ಸೀನ್‌ ಎಲ್ಲ ಇಲ್ಲಿ ಇಟ್ಕೊಳ್ಳಬೇಡ ಎಂದು ಕಮೆಂಟ್‌ ಹಾಕಿ ಆಕೆಗೆ ಬುದ್ಧಿವಾದ ಹೇಳಿದ್ದಾರೆ. ಆದರೆ ಪಡ್ಡೆಗಳ ಪಾಲಿಗೆ ಮಾತ್ರ ಸಾಕ್ಷಾತ್‌ ಹೃದಯೇಶ್ವರಿಯೇ ಆಗಿದ್ದಾಳೆ. ಒಟ್ನಲ್ಲಿ ನಿಕ್ಕಿ ಮಾತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.

Nikki Tamboli 9

ಅರ್ಬಾಜ್ ಪಟೇಲ್ ಜೊತೆಗಿನ ಎಂಗೇಜ್ ಆಗಿರುವ ಕುರಿತು ನಟಿ ಈ ವರ್ಷ ಫೆಬ್ರವರಿಯಲ್ಲಿ ಅಧಿಕೃತವಾಗಿ ಹೇಳಿದ್ದರು. ಮದುವೆ ಬಗ್ಗೆ ಅದ್ಯಾವಾಗ ಗುಡ್ ನ್ಯೂಸ್ ಕೊಡ್ತಾರೆ ಎಂದು ಕಾದುನೋಡಬೇಕಿದೆ. ‘ಬಿಗ್ ಬಾಸ್’ ಹಿಂದಿ 14 ಮತ್ತು ಮರಾಠಿ ‘ಬಿಗ್ ಬಾಸ್ 5’ರಲ್ಲಿ ನಟಿ ನಿಕ್ಕಿ ತಂಬೋಲಿ ಸ್ಪರ್ಧಿಸಿದ್ದರು. ಕೆಲವು ಮ್ಯೂಸಿಕ್ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದಾರೆ.

Nikki Tamboli 4

ಮರಾಟಿ ಬಿಗ್ ಬಾಸ್‌ ಕಂಟೆಸ್ಟೆಂಟ್‌ ಆಗಿದ್ದ ನಿಕ್ಕಿ ತಂಬೋಲಿ ಎಡವಟ್ಟು ಮಾಡಿ ಸುದ್ದಿಯಾಗಿದ್ದಳು. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಮ್ಯಾಜಿಕ್ ಡೈಮಂಡ್ ಉಳಿಸಿಕೊಳ್ಳುವ ನಿಕ್ಕಿ ತಾಂಬೋಲಿ, ಸಹಸ್ಪರ್ಧಿಗಳಾಗಿದ್ದ ಜಾನ್ಹವಿ, ವರ್ಷಾ, ಆರ್ಯಾ ಜೊತೆ ಗಲಾಟೆ ಮಾಡಿದ್ದಳು.
ಈಕೆಯ ಲವ್ವರ್‌ ಅರ್ಬಾಜ್ ನಿಕ್ಕಿಗೆ ಸಹಾಯ ಮಾಡುವ ಭರದಲ್ಲಿ ಡೋರ್ ತೆಗೆದಿದ್ದ. ಆಗ ನಿಕ್ಕಿ ಕೋಣೆಯ ಒಳಗೆ ಹೋಗುವ ಸಾಹಸ ಮಾಡುವಾಗ ಇನ್ನೇನು ನಿಕ್ಕಿ ಗೆದ್ದಳು ಎಂದುಕೊಳ್ಳುತ್ತಿರುವಾಗ ಆರ್ಯಾ, ನಿಕ್ಕಿಯ ಕಪಾಳಕ್ಕೆ ಭಾರಿಸಿದ್ದಳು.

error: Content is protected !!