IPL ಅಭಿಮಾನಿಗಳಿಗೆ ಗುಡ್​ನ್ಯೂಸ್! ಆರ್​ಸಿಬಿಗೆ ಸಿಕ್ತು ಮತ್ತೆ ಮೊದಲ ಪಂದ್ಯ!

ಲೀಗ್ ಪುನಾರಂಭದ ದಿನಾಂಕ ಬಿಡುಗಡೆ, ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವರು. ಅದರಂತೆ ಐಪಿಎಲ್ ನಿಂತು ಮತ್ತೆ ಪುನರ್ ಆರಂಭಗೊಂಡರೂ ಕೂಡ ಆ ಎರಡು ತಂಡಗಳೇ ಮುಖಾಮುಖಿಯಾಗುತ್ತಿವೆ.


ಭಾರತ-ಪಾಕಿಸ್ತಾನದ ನಡುವಿನ ಯುದ್ಧದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಆವೃತ್ತಿ ಮೇ 17 ರಿಂದ ಪುನರಾರಂಭವಾಗಲಿದೆ ಎಂದು ಬಿಸಿಸಿಐ ಸ್ಙಷ್ಟಪಡಿಸಿದೆ. ಸೋಮವಾರ (ಮೇ 12) ತಡಾರಾತ್ರಿ ಈ ಆದೇಶ ಹೊರಿಡಿಸಿರುವ ಬಿಸಿಸಿಐ ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.ಹಾಗೇ ಉಳಿದ 17 ಪಂದ್ಯಗಳು 6 ವಿವಿಧ ಮೈದಾನಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

error: Content is protected !!