ಸಾಯಲು ನಿದ್ದೆ ಮಾತ್ರೆ ಸೇವಿಸಿದ ತಾಯಿ-ಮಗ: ಡೆತ್‌ನೋಟಲ್ಲಿ ಏನಿದೆ?

ಬೆಳ್ತಂಗಡಿ: ಅತಿಯಾದ ನಿದ್ದೆ ಮಾತ್ರೆ ಸೇವಿಸಿ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ| ಕುಂಞಿರಾಮನ್ ನಾಯ‌ರ್ ಎಂಬವರ ಪತ್ನಿ ಕಲ್ಯಾಣಿ (96) ಮೃತಪಟ್ಟಿದ್ದು ಇವರ ಪುತ್ರ ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ ಕೆ. (58) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರೂ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಮಲಗಿದ್ದ ಸ್ಥಳದಲ್ಲಿ ಜಯರಾಂ ಬರೆದ ನಾಲ್ಕು ಪುಟಗಳ ಡೆತ್‌ನೋಟ್‌ ಪತ್ತೆಯಾಗಿದೆ.

ಸಾಲದ ಸಮಸ್ಯೆ, ತನ್ನ ಅನಾರೋಗ್ಯದ ಕಾರಣದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದೆಲ್ಲಾ ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

ಶಿಕ್ಷಕ ಜಯರಾಂ ಕೆ. ಅವರ ಆರೋಗ್ಯ ಸ್ಥಿರವಾಗಿದ್ದು, ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಮನೆಯಲ್ಲಿ ತಾಯಿ ಮಗನ ಯಾವುದೇ ಚಟುವಟಿಕೆ ಕಂಡು ಬರದ ಕಾರಣ ಊರವರು ಆತಂಕದಿಂದ ಬಂದು ನೋಡಿದರು. ಈ ವೇಳೆ ಇಬ್ಬರೂ ದೇವರ ಕೋಣೆಯ ಎದುರು ನರಳಾಡುತ್ತಿರುವುದು ಕಾಣಿಸಿತ್ತು. ತಕ್ಷಣ ಇಬ್ಬರನ್ನೂ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅಜ್ಜಿ ಕಲ್ಯಾಣಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!