ಟಿವಿ ಪರದೆಯಿಂದ ಬೆಳ್ಳಿತೆರೆಗೆ ಬಂದ ಅನಸೂಯ ಭಾರದ್ವಾಜ್ ಗೆ ನಾಯಕಿಯ ಅವಕಾಶ ಯಾಕೆ ಸಿಗಲಿಲ್ಲ ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಜಬರ್ದಸ್ತ್ ನಂತಹ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ ಅವರು, ಕ್ಷಣಂ, ರಂಗಸ್ಥಳಂ, ಪುಷ್ಪ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಫೋಟೋ ಹಾಕುವ ಇವರ ಫೋಟೋಗಳು ಸಖತ್ ವೈರಲ್ ಆಗುತ್ತವೆ.
ಟ್ರೋಲ್‌ಗಳು ಈಕೆಯನ್ನು ಆಂಟಿ ಎಂದೇ ಕರೆಯುತ್ತಾರೆ.
ತಮಗೆ ಇಷ್ಟ ಬಂದ ಹಾಗೆ ಬಟ್ಟೆ ಹಾಕಿಕೊಳ್ಳುವ ಹಕ್ಕು ನನಗಿದೆ. ನಾನು ಆಂಟಿಯಾದರೂ ಸಾಧನೆ ಮಾಡಿದ್ದೇನೆ. ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ . ಆಂಟಿ ಎಂದರೂ ಕ್ಯಾರ್ ಮಾಡದ ಅನಸೂಯರ ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್‌ಗೆ ಒಳಗಾಗಿದ್ದಾಗಿ ಹೇಳಿದ್ದಾರೆ.
ನೀವು ಏಕೆ ನಾಯಕಿ ಆಗಲಿಲ್ಲ ಎಂದು ಅನೇಕರು ಕೇಳುತ್ತಾರೆ. ಅದಕ್ಕೆ ಹಲವು ಕಾರಣಗಳಿವೆ ಎಂದಿದ್ದಾರೆ.
ಕೆಲವು ಸ್ಟಾರ್ ನಟರು ಮತ್ತು ನಿರ್ದೇಶಕರು ತಮ್ಮನ್ನು ಕಾಸ್ಟಿಂಗ್ ಕೌಚ್‌ಗೆ ಒಳಪಡಿಸಲು ಯತ್ನಿಸಿದ್ದರಿಂದ ಅವಕಾಶಗಳನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ಕೂಡ ಒಂದು ಕಾರಣ.
ನಾಯಕಿ ಆಗದೇ ಇರೋದಕ್ಕೆ ಬೇಸರ ಇದೆ. ಆದರೆ ಈಗ ಸಿಗುತ್ತಿರುವ ಅವಕಾಶಗಳಿಂದ ಖುಷಿಯಾಗಿದ್ದೇನೆ ಎಂದಿದ್ದಾರೆ.