ಮಂಗಳೂರು: ಮಂಗಳೂರು ಉತ್ತರ ವಶಾಸಕ ಡಾ| ಭರತ್ ಶೆಟ್ಟಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನಿಲ್ ಸಾಲ್ಯಾನ್ ಪ್ರಕರಣದ ಆರೋಪಿ.
ಈತ ಮೇ 6ರಂದು ಸುಹಾಸ್ ಶೆಟ್ಟಿ ಹತ್ಯೆ ಮತ್ತು ಗುಂಪು ಹತ್ಯೆ ಭರತ್ ಶೆಟ್ಟಿ ಅವರ ಕ್ಷೇತ್ರದಲ್ಲಿ ನಡೆದಿದೆ. ಗುಂಪು ಹತ್ಯೆಯನ್ನು ಮರೆಮಾಚಿ ಬಿಜೆಪಿ ಪಕ್ಷಕ್ಕೆ ಮೈಲೇಜ್ ನೀಡುವ ಸಲುವಾಗಿ ಸುಹಾಸ್ ಹತ್ಯೆ ಮಾಡಲಾಗಿದೆಯೇ? ಎಂದು ಬರೆದಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುನಿಲ್ ಯಾರೆಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಈತನ ಪತ್ತೆ ಕಾರ್ಯಕ್ಕೆ ನಗರ ಸೆನ್ ಪೊಲೀಸರು ಮುಂದಾಗಿದ್ದಾರೆ.