ಇನ್ನೊಂದು ಹೆಣ ಬೀಳುವ ಮೊದಲು, ವಿ.ಎಚ್.ಪಿ ನಾಯಕರ ಬಂಧನದ ಮೂಲಕ‌ ಕಮ್ಯೂನಲ್‌ ಟಾಸ್ಕ್ ಪೋರ್ಸ್‌ ಉದ್ಘಾಟನೆಯಾಗಲಿ: SDPI ರಿಯಾಝ್ ಫರಂಗಿಪೇಟೆ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇನ್ನೊಂದು ಹೆಣ ಬೀಳುವ ಮೊದಲು ಆ್ಯಂಟಿ ಕಮ್ಯೂನಲ್ ಟಾಸ್ಕ್ ಪೋರ್ಸ್ ಬರಲಿ, ಬಜರಂಗದಳ, ವಿ.ಎಚ್.ಪಿ ನಾಯಕರ ಬಂಧನದ ಮೂಲಕ‌ ಟಾಸ್ಕ್ ಪೋರ್ಸ್‌ನ ಉದ್ಘಾಟನೆಯಾಗಲಿ ಎಂದು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿಕೆ ನೀಡಿದ್ದಾರೆ.


ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಹೇಳಿಕೆ ನೀಡಿರುವ ಅವರು, ಸುಹಾಸ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ‌ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ವಿ.ಎಚ್.ಪಿ, ಬಜರಂಗದಳ ಇಲ್ಲಿನ ವಾತವರಣ ತಿಳಿಯಾಗಲು ಬಿಡ್ತಿಲ್ಲ ಎಂದು ಆರೋಪಿಸಿದರು.
ಹಿಂದೂ ಸಂಘಟನೆಯವರು ಪೊಲೀಸರ ತನಿಖೆಯನ್ನು‌ ದಿಕ್ಕು ತಪ್ಪಿಸುವ ಹೇಳಿಕೆಯನ್ನು‌ ನೀಡುತ್ತಿದ್ದಾರೆ. ಬಿಜೆಪಿ‌ ಶಾಸಕರು ತಪ್ಪು ಸಂದೇಶಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಮತ್ತಷ್ಟು ಕೋಮುಸ್ಥಿತಿಗೆ ತಳ್ಳುವ ಕೆಲಸ ನಡೆಯುತ್ತಿದೆ. ಕೋಮು‌ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಿರುವ ಶರಣ್ ಪಂಪ್ ವೆಲ್ ಅನ್ನು ಪೊಲೀಸರು ಯಾಕೆ ನಿಯಂತ್ರಿಸುತ್ತಿಲ್ಲ. ಶರಣ್ ಪಂಪ್ ವೆಲ್ ಬಗ್ಗೆ ಪೊಲೀಸ್ ಇಲಾಖೆಗೆ ಯಾಕೆ ಮೃದು ಧೋರಣೆ ತೋರಿಸುತ್ತಿದೆ ಎಂದು ಪ್ರಶ್ನಿಸಿದರು.

ಕೋಮುವಾದಿ ಶಾಸಕ ಹರೀಶ್ ಪೂಂಜಾ ಮೇಲೆ ಯಾಕೆ ಕ್ರಮ ಆಗ್ತಿಲ್ಲ. ಜಿಲ್ಲೆಯ ಸ್ವಾಸ್ಥ್ಯ ಕೆಡಿಸಲು ಪೊಲೀಸ್ ಇಲಾಖೆಯೆ ಅವಕಾಶ ಕೊಟ್ಟಿದೆಯಾ.? ಆದಷ್ಟು ಬೇಗ ಶರಣ್ ಪಂಪ್‌ವೆಲ್‌ ಬಂಧಿಸಿ ಜೈಲಿಗಟ್ಟಿದ್ರೆ ಪೊಲೀಸರಿಗೆ ಕಾನೂನಾತ್ಮಕ ಕೆಲಸ ಮಾಡಲು ಸುಲಭವಾಗುತ್ತೆ. ಸ್ಪೀಕರ್ ಯು.ಟಿ ಖಾದರ್ ಈ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಅಂದಿದ್ದಾರೆ. ಸಭಾಧ್ಯಕ್ಷರ ಹೇಳಿಕೆಯನ್ನು ನಾವು ಗೌರವಿಸುತ್ತೇವೆ ಎಂದು ರಿಯಾಝ್ ಫರಂಗಿಪೇಟೆ ಹೇಳಿಕೆ ನೀಡಿದ್ದಾರೆ.

error: Content is protected !!