ಮಂಡ್ಯ: ಮಗಳನ್ನು ಕೊಂದು ಜೈಲು ಸೇರಿದ್ದ ಆರೋಪಿಯ ಅಪ್ಪನನ್ನೇ ಕೊಂದು ಪ್ರತೀಕಾರ ತೀರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ವೆಂಕಟೇಶ್ ಎನ್ನುವಾತ ಪ್ರಕರಣದ ಆರೋಪಿಯಾಗಿದ್ದು, ಈತ ನರಸಿಂಹೇಗೌಡನನ್ನು ಚಾಕುವಿನಿಂದ ಇರಿದು ಕೊಂದು ಮುಗಿಸಿ ತನ್ನ ಸೇಡು ತೀರಿಸಿಕೊಂಡಿದ್ದಾನೆ.

ಘಟನೆಯ ವಿವರ:
ನರಸಿಂಹೇ ಗೌಡನ ಪುತ್ರ ನಿತೀಶ್, ವೆಂಕಟೇಶನ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ. ಮಗಳ ಸಾವಿನ ಪ್ರತೀಕಾರವಾಗಿ ದೀಪಿಕಾಳ ತಂದೆ ವೆಂಕಟೇಶ್ ಆರೋಪಿ ನಿತೀಶ್‌ನ ತಂದೆ ನರಸಿಂಹೇಗೌಡನನ್ನು ಹತ್ಯೆ ಮಾಡಿದ್ದಾನೆ.

ಏನಿದು ಪ್ರಕರಣ?:
ಟೀಚರ್ ದೀಪಿಕಾ ಮತ್ತು ಈಕೆಗಿಂತ ಸಣ್ಣ ಪ್ರಾಯದ ನಿತೀಶ್ ಇಬ್ಬರು ಸ್ನೇಹ ಹಾಗೂ ಸಲುಗೆಯಿಂದ ಇದಿದ್ದರು. ಇದನ್ನು ಗಮನಿಸಿದ ದೀಪಿಕಾಳ ಗಂಡ ಹಾಗೂ ಕುಟುಂಬಸ್ಥರು ನಿತೀಶ್‌ಗೆ ದೀಪಿಕಾಳಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದರು. ಆಗ ದೀಪಿಕಾ, ನಿತೀಶ್ ನನಗೆ ತಮ್ಮ ಇದ್ದಂತೆ ಎಂದು ಹೇಳಿದ್ದಳು. ಕುಟುಂಬಸ್ಥರ ಎಚ್ಚರಿಕೆಯ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ಆದರೆ ದೀಪಿಕಾ ಇಲ್ಲದೆ ಪರಿತಪಿಸುತ್ತಿದ್ದ ನಿತೀಶ್ ಪರಿತಪಿಸುತ್ತಿದ್ದ.
ಕಳೆದ 2024 ಜ. 22ರಂದು ನಿತೀಶ್ ಬರ್ತ್ಡೇ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ದೀಪಿಕಾ ಆತನಿಗೆ ಶರ್ಟ್ ಗಿಫ್ಟ್ ಕೊಡಲು ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿ, ಕೊಲೆಯಲ್ಲಿ ಅಂತ್ಯವಾಗಿತ್ತು. ಮಂಡ್ಯ ಪೊಲೀಸರು ಕೊಲೆ ಆರೋಪಿ ನಿತೀಶ್‌ನನ್ನು ಬಂಧಿಸಿದ್ದರು.
ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರ ಬಂದಿದ್ದ. ತನ್ನ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಹೊಂಚು ಹಾಕುತ್ತಿದ್ದ. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್ ತಂಗಿ ಮದುವೆ ನಿಶ್ಚಯವಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವೆಂಕಟೇಶ್ ನಿತೀಶ್ ತಂದೆ ನರಸಿಂಹೇಗೌಡರನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕೊಲೆ ಮಾಡುವ ವೇಳೆ ನನ್ನ ಮಗಳನ್ನು ಕೊಲೆ ಮಾಡಿ ನಿನ್ನ ಮಗಳ ಮದುವೆ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.