ಮಂಗಳೂರು: ತುಳು ಚಲನಚಿತ್ರ ಗಂಟ್ ಕಲ್ವೆರ್ ಮೇ 23ರ ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರ ನಿರ್ದೇಶಕ ಸುಧಾಕರ್ ಬನ್ನಂಜೆ ಮಾಹಿತಿ ನೀಡಿದ್ದಾರೆ.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಚಿತ್ರ ಈಗಾಗಲೇ ಸೆನ್ಸಾರ್ ಆಗಿದೆ. ತುಳುಮೂಲದ ಕನ್ನಡ ಚಿತ್ರರಂಗದ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ವಿ. ಮನೋಹರ್ ಇದಕ್ಕೆ ಸಂಗೀತ ನೀಡಿದ್ದಾರೆ. ತುಳುನಾಡಿನ ಅಪ್ಪಟ ಪ್ರತಿಭೆ ತಮ್ಮ ಲಕ್ಷ್ಮಣ ಕಲಾನಿರ್ದೇಶನ, ಕೆ.ಗಿರೀಶ್ ಕುಮಾರ್ ಸಂಕಲನ, ಶಂಕರ್ ರವಿಕಿಶೋರ್ ಛಾಯಾಗ್ರಹಣ ಪ್ರಶಾಂತ್ ಎಳ್ಳಂಪಳ್ಳಿ ಮತ್ತು ಶ್ರೀರಾಮ್ ಸಸಿಹಿತ್ತು ಸಹ ನಿರ್ದೇಶಕರಾಗಿ ದುಡಿದಿದ್ದಾರೆ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಟ ಅರ್ಹುನ್ ಕಾಪಿಕಾಡ್, ತುಳು ನಾಟಕ ಧಾರಾವಾಹಿ ಸಿನಿಮಾಗಳಲ್ಲಿ ತುಳುನಾಡಿನ ಕೀರ್ತಿಯನ್ನು ಎತ್ತಿಹಿಡಿದ ಸುಧಾಕರ್ ಬನ್ನಂಜೆಯವರು ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ದೇಶನ ಮಾಡಿದ್ದಾರೆ. ಸ್ನೇಹಕೃಪಾ ಲಾಂಚನದಲ್ಲಿ ಉಪ್ಪಳ ರಾಜಾರಾಮ ಶೆಟ್ಟಿ ಅರ್ಪಿಸಿ ಗಿರೀಶ್ ಪೂಜಾರಿ ಸಹಕಾರದೊಂದಿಗೆ ಸುಧಾಕರ ಬನ್ನಂಜೆ ನಿರ್ಮಿಸಿರುವ ಈ ಚಿತ್ರದ ಇತರ ಸಹನಿರ್ಮಾಪಕರು ಮಮತಾ ಎಸ್ ಬನ್ನಂಜೆ, ಕೃತಿ ಆರ್ ಶೆಟ್ಟಿ, ಪ್ರಾರ್ಥನ್ ಬನ್ನಂಜೆ ಪ್ರೇರಣ್ ಬನ್ನಂಜೆ, ತಾರಾಗಣದಲ್ಲಿ ನವೀನ್ ಪಡೀಲ್, ಅರವಿಂದ ಬೋಳಾರ್, ಆರ್ಯನ್ ಶೆಟ್ಟಿ,ಸ್ಮಿತಾ ಸುವರ್ಣ,ಭೋಜರಾಜ್ ವಾಮಂಜೂರು, ಸುಧೀರ್ ಕೊಠಾರಿ, ಉಮೇಶ್ ಮಿಜಾರು,ಸುಂದರ ರೈ ಮಂದಾರ ಸಂದೀಪ ಶೆಟ್ಟಿ ಮಾಣಿಬೆಟ್ಟು.ಗಿರೀಶ್ ಶೆಟ್ಟಿ ಕಟೀಲು., ನಾಗೇಶ್ ಡಿ ಶೆಟ್ಟಿ, ಕ್ಲಾಡಿ ಡಿಲೀಮಾ…ಸಂಪತ್ ,ರವಿ ಸುರತ್ಕಲ್,ವಸಂತ ಮುನಿಯಾಲ್, ಯಾದವ ಮಣ್ಣ ಗುಡ್ಡೆ, ಪ್ರದೀಪ್ ಆಳ್ವ, ತಮ್ಮ ಲಕ್ಷಣ,ಪ್ರಶಾಂತ್ ಎಳ್ಳಂಪಳ್ಳಿ, ರಣವೀರ್, ಶೇಖರ ಪಾಂಗಾಳ,ರಾಕೇಶ್ ಆಚಾರ್ಯ ಮಂಗೇಶ್ ಭಟ್ ವಿಟ್ಲ,ಜೀವನ್ ಉಲ್ಲಾಳ,ಚೇತಕ್ ಪೂಜಾರಿ,ಮೋಹನ್ ಕೊಪ್ಪಳ, ಅರುಣ್ ಸತೀಶ್ ಕಲ್ಯಾಣಪುರ ಸುರೇಶ್ ಪಾಂಗಾಳ, ಸಂಚಿತ, ಮೈತ್ರಿ, ದಿಶಾ, ನಮಿತಾ ಸಿಂಚನಾ ಉಷಾ ಫೆರ್ನಾಂಡಿಸ್ ಮೋನಿಕಾ ಅಂದ್ರಾದೆ, ಶಾಂತಿ ಶೆಣೈ, ಸುಮಾಲಿನಿ ರಮಾನಂದ ಕರ್ಪೆ ಧನಂಜಯ ವಿಟ್ಲ ಅಶೋಕ ಪ್ರೇರಣ್ ಮಾ.ಪದ್ಮನಾಭ, ನಿಧಿ, ಸಮೃದ್ದಿಮೊದಲಾದ ತುಳುನಾಡ ಅನೇಕ ಪ್ರತಿಭಾವಂತ ನಟ ನಟಿಯರು ಅಭಿನಯಿಸಿದ್ದಾರೆ ಎಂದರು.
ಪ್ರತಿಭಾವಂತ ನಾಯಕ ನಟರಾದ ಅಥರ್ವ ಪ್ರಕಾಶ್, ಶ್ರೀಕಾಂತ ರೈ, ಪ್ರಣವ್ ಹೆಗ್ಡೆ, ಶೈಲೇಶ್ ಕೋಟ್ಯಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.