ನವದೆಹಲಿ: ಪೆಹಲ್ಗಾಂ ಉಗ್ರ ದಾಳಿ ಬಳಿಕ ಸಿಂಧೂ ನದಿ ಒಪ್ಪಂದ, ವಾಘ ಗಡಿ ಸ್ಥಗಿತ ಸೇರಿದಂತೆ ಪ್ರಮುಖ ನಿರ್ಧಾರ ಕೈಗೊಂಡಿದ್ದ ಭಾರತ ಇದೀಗ ಪಾಕಿಸ್ತಾನ ಜೊತೆಗಿನ ಎಲ್ಲಾ ಅಮದು ವಹಿವಾಟು ಬ್ಯಾನ್ ಮಾಡಿ ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ ಹೊರಡಿಸಿದೆ. ಪಾಕಿಸ್ತಾನ ಜೊತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷಾಗಿ ಯಾವುದೇ ಆಮದು ವ್ಯವಹಾರವಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಫಾರಿನ್ ಟ್ರೇಡ್ ಪಾಲಿಸಿ 2023((FTP) ಅಡಿಯಲ್ಲಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಕುರಿತು ಡೈರೆಕ್ಟೋರೇಟ್ ಜನರಲ್ ಆಫರ್ ಫಾರಿನ್ ಟ್ರೇಡ್ (DGFT) ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ ಭಾರತದ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಪಾಲಿಸಿ ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದ ಜೊತೆಗಿನ ಎಲ್ಲಾ ಆಮದು ವಹಿವಾಟನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಪಾಕಿಸ್ತಾನ ಜೊತೆಗಿನ ವ್ಯಾಪಾರ ವಹಿವಾಟು ಭಾರತದ ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡುತ್ತಿರುವ ಕಾರಣ ಈ ತಕ್ಷಣದಿಂದಲೇ ಎಲ್ಲಾ ವಹಿವಾಟನ್ನು ಬ್ಯಾನ್ ಮಾಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಬೇಕಿದ್ದರೂ, ಭಾರತ ಸರ್ಕಾರದ ಅನುಮೋದನೆ ಪಡೆಯತಕ್ಕದ್ದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಎಲ್ಲಾ ವಹಿವಾಟು ಬಂದ್
ಪೆಹಲ್ಗಾಂ ದಾಳಿ ಬೆನ್ನಲ್ಲೇ ಭಾರತ ಅಟ್ಟಾರಿ ವಾಘಾ ಗಡಿಯನ್ನು ಮುಚ್ಚಿತ್ತು. ಇದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಇದೀಗ ಇತರ ಯಾವುದೇ ಮಾರ್ಗವಾಗಿ ಅಥವಾ ಮೂಲವಾಗಿಯೂ ಪಾಕಿಸ್ತಾನದ ಜೊತೆ ವಹಿವಾಟು ನಡೆಸುವುದನ್ನು ಭಾರತ ಬ್ಯಾನ್ ಮಾಡಿದೆ.
ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ
ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಲು ಭಾರತ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿದೆ. ಈ ಮೂಲಕ ಪಾಕಿಸ್ತಾನಕ್ಕೆ ಹರಿದು ಬರುತ್ತಿರುವ ಆರ್ಥಿಕ ಸಹಾಯ ನಿಲ್ಲಿಸಲು ಭರಾತ ಪ್ಲಾನ್ ಮಾಡಿದೆ. ಇದರ ಜೊತೆಗೆ ಭಾರತ ಕೂಡ ಟ್ರೇಡ್ ನಿಲ್ಲಿಸಿದ್ದು, ಪಾಕಿಸ್ತಾನಕ್ಕೆ ಮತ್ತಷ್ಟು ಆರ್ಥಿಕ ಹೊರೆ ನೀಡಲು ಮುಂದಾಗಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ತೆಗೆದುಕೊಂಡ ಕೆಲ ಕ್ರಮಗಳಿಂದ ಪಾಕಿಸ್ತಾನ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಪಾಕಿಸ್ತಾನ ಮಿಲಿಟರಿ ಪ್ರಯೋಗ ಅಸಾಧ್ಯವಾಗಲಿದೆ.