ಪಹಲ್ಗಾಂ ಉಗ್ರ ದಾಳಿಯನ್ನು ಖಂಡಿಸಿದ ಕಾಂಗ್ರೆಸ್: ಪ್ರತೀಕಾರ ತೀರಿಸಿ ಮೋದೀಜಿ, ನಿಮ್ಮೊಂದಿಗೆ ನಾವಿದ್ದೇವೆ ಎಂದ ಖರ್ಗೆ

ನವದೆಹಲಿ: ಪಹಲ್ಗಾಂ ಉಗ್ರ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ತನ್ನ ವರ್ಕಿಂಗ್ ಕಮಿಟಿಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಭಾರತೀಯರು ಎಲ್ಲರು ಒಗ್ಗಟ್ಟಾಗಿದ್ದಾರೆ. ಭಾರತದ ಪ್ರತೀಕಾರಕ್ಕೆ ಸಂಪೂರ್ಣ ನಮ್ಮ ಬೆಂಬಲ ಇದೆ ಎಂದು ಸಭೆಯ ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಆಡಳಿತ ಸರ್ಕಾರಕ್ಕೆ ಹೇಳಿದ್ದಾರೆ.


ಈ ಬಾರಿ ಭಾರತ ತೆಗೆದುಕೊಳ್ಳುವ ನಿರ್ಧಾರ ಹೇಗಿರಬೇಕೆಂದರೆ, ಪಾಕಿಸ್ತಾನದ ಭಯೋತ್ಪಾದನೆ ಸಂಪೂರ್ಣ ನಾಶವಾಗಬೇಕು. ಈ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್, ಬೆಂಬಲ ನೀಡಿದವರು ಎಲ್ಲರಿಗೂ ತಕ್ಕ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಣಯ ಅಂಗೀಕರಿಸಿದೆ. ಇದು ರಾಜಕೀಯ ಮಾಡುವ ಸಮಯವಲ್ಲ. ಈ ಬಾರಿ ಭಾರತ ದೇಶದ ಮೇಲಿನ ದಾಳಿಗೆ ಒಗ್ಗಟ್ಟಾಗಿ ತಕ್ಕ ಪಾಠ ಕಲಿಸುವ ಸಂದೇಶ ನೀಡಬೇಕಿದೆ ಎಂದು CWG ಸಭೆಯ ನಿರ್ಣಯಗಳಲ್ಲಿ ಉಲ್ಲೇಖಿಸಿದೆ.

ದಾಳಿಗೆ ತುತ್ತಾದ ಕುಟುಂಬದ ಜೊತೆ ಪಕ್ಷವಿದೆ. ಇಡೀ ಭಾರತೀಯರು ಕುಟುಂಬದ ಜೊತೆಗಿದ್ದಾರೆ. ಸರ್ಕಾರ ನೀಡುವ ಆರ್ಥಿಕ ಸಹಾಯ ಮಾತ್ರವಲ್ಲ, ಅವರಿಗೆ ಮಾನಸಿಕವಾಗಿ ಧೈರ್ಯ ನೀಡಬೇಕಿದೆ. ಸವಾಲು ಮೆಟ್ಟಿ ನಿಲ್ಲಸು ಶಕ್ತಿ ತುಂಬಬೇಕಿದೆ. ಇಡೀ ಕುಟುಂಬಗಳ ಜೊತೆ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಣಯದಲ್ಲಿ ಹೇಳಲಾಗಿದೆ. ಇದೇ ವೇಳೆ ದೇಶದ ಎಲ್ಲಾ ಜನತೆ ಈ ಕುಟುಂಬದ ಜೊತೆ ನಿಲ್ಲಬೇಕು ಎಂದಿದೆ.

ಈ ಸಭೆಯಲ್ಲಿ ಕಾಂಗ್ರೆಸ್ ಪ್ರಮುಖವಾಗಿ ಭದ್ರತಾ ವೈಫಲ್ಯ ಕುರಿತು ಧ್ವನಿ ಎತ್ತಿದೆ. ಇದು ಭದ್ರತಾ ವೈಫಲ್ಯದಿಂದ ಆಗಿರುವ ಘಟನೆ. ಇದರ ಹೊಣೆ ಯಾರು ಹೊತ್ತುಕೊಳ್ಳಬೇಕು? ಈ ಭದ್ರತಾ ವೈಫಲ್ಯ ಆಗಿದ್ದು ಹೇಗೆ? ಎಲ್ಲಾ ತನಿಖೆ ನಡೆಯಬೇಕು. ತನಿಖೆಯಲ್ಲಿ ಈ ವೈಫಲ್ಯಕ್ಕೆ ಕಾರಣ ಯಾರು ಅನ್ನೋದು ಗೊತ್ತಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ. ಕೇಂದ್ರ ಸರ್ಕಾರ ದೃಢ ನಿರ್ಧಾರದಿಂದ ಮುನ್ನಗ್ಗಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಪಾಕಿಸ್ತಾನ ವಿರುದ್ದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಹೇಳಿದೆ.

error: Content is protected !!