ʻವೇವ್ಸ್ʼ ಸಮ್ಮೇಳನದಲ್ಲಿ (World Audio Visual and Entertainment Summit) ಕಾರ್ತಿಕ್ ಆರ್ಯನ್ ತಾಯಿಯೊಂದಿಗೆ ಶ್ರೀಲೀಲಾ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಶ್ರೀಲೀಲಾ ತನ್ನ ಭಾವೀ ಅತ್ತೆ ಜೊತೆ ಕಾಣಿಸಿಕೊಂಡರಾ ಎಂಬ ಬಗ್ಗೆ ಗಾಸಿಪ್ ಪ್ರಿಯರು ಚರ್ಚೆ ಆರಂಭಿಸಿದ್ದಾರೆ. ಇತೀಚೆಗೆ ಶ್ರೀಲೀಲಾ ಕಾರ್ತಿಕ್ ಜೊತೆ ಡೇಂಟಿಂಗ್‌ನಲ್ಲಿದ್ದಾರೆ ಎಂಬ ಗಾಸಿಪ್‌ಗಳ ನಡುವೆ ಈ ಸುದ್ದಿ ಬಿಟೌನ್‌ನಲ್ಲಿ ಭಾರೀ ಸದ್ದು ಮಾಡಿದೆ.
ನಿನ್ನೆ ಶ್ರೀಲೀಲಾ ವೇವ್ಸ್ ಸಮ್ಮೇಳನದಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ಕಾರ್ತಿಕ್ ಆರ್ಯನ್ ತಾಯಿಯೊಂದಿಗೆ ನಟಿ ಮಾತನಾಡುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಈ ಹಿಂದೆ ಅವಾರ್ಡ್ ಫಂಕ್ಷನ್ ಒಂದರಲ್ಲಿ ಕಾರ್ತಿಕ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ಡಾಕ್ಟರ್ ಆಗಿರುವ ಸೊಸೆ ಬೇಕು ಎಂದಿದ್ದರು.
ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಂದಿನ ಆ ಹೇಳಿಕೆ ನಂತರ ಇದೀಗ ಕಾರ್ತಿಕ್ ಆರ್ಯನ್ ತಾಯಿ ಮತ್ತು ಶ್ರೀಲೀಲಾ ಒಟ್ಟಿಗೆ ಕಾಣಿಸಿಕೊಂಡಿರೋದು ಇಷ್ಟೆಲ್ಲಾ ಗಾಸಿಪ್ ಹರಡಲು ಕಾರಣವಾಗಿದೆ.
ಅಂದಹಾಗೆ, ಅನುರಾಗ್ ಬಸು ನಿರ್ದೇಶನದ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್‌ಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. 2025ರ ದೀಪಾವಳಿಯಂದು ಈ ಸಿನಿಮಾ ರಿಲೀಸ್ ಆಗಲಿದೆ.
ಶ್ರೀಲೀಲಾ ಇದೀಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದು, ಹಲವು ಹೈ ಬಜೆಟ್ ಫಿಲ್ಮ್‌ಗಳು ಸೆಟ್ಟೇರಿವೆ.