ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ನಂಬಲಾದ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನ ಭದ್ರತೆಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.
ಲಷ್ಕರ್-ಎ-ತೈಬಾ ಮುಖ್ಯಸ್ಥ, ಉಗ್ರ ಹಫೀಜ್ ಸಯೀದ್ ನಿವಾಸದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಪಾಕಿಸ್ತಾನ ಸಶಸ್ತ್ರ ಪಡೆಗಳ ಸಶಸ್ತ್ರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಲಾಹೋರ್‌ನಲ್ಲಿರುವ ಹಫೀಜ್ ಸಯೀದ್‌ನ ನಿವಾಸದ ಸುತ್ತಲೂ ವ್ಯಾಪಕ ಕಣ್ಗಾವಲು ಕ್ರಮಗಳು ಜಾರಿಯಲ್ಲಿವೆ ಎಂದು ತಿಳಿದು ಬಂದಿದೆ. ಭಾರತ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸುವ ಪ್ರತಿಜ್ಞೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಹಫೀಝ್ ಮೇಲೆ ಕಣ್ಣಿಟ್ಟಿದೆ. ಉಗ್ರ ದಾಳಿಯ ಹಿಂದೆ ಹಫೀಝ್ ಕೈವಾಡ ದೃಢಪಡುತ್ತಲೇ ಪಾಕಿಸ್ತಾನ ಭದ್ರತೆಯನ್ನು ಹೆಚ್ಚಿಸಿದ್ದು ನಾಲ್ಕು ಕಿಮೀ ದೂರದುದ್ದಕ್ಕೂ ಕಣ್ಗಾವಲು ಇರಿಸಿದೆ ಎಂದು ಹೇಳಲಾಗಿದೆ.