
ಶ್ರೀನಗರ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲೇ ಜಿಪ್‌ಲೈನ್ ಆಪರೇಟರ್ ‘ಅಲ್ಲಾಹು ಅಕ್ಬರ್’ ಎಂದು ಮೂರು ಬಾರಿ ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದ್ದು ಆತನಿಗೆ ದಾಳಿ ನಡೆಯುವುದು ಮೊದಲೇ ಗೊತ್ತಿತ್ತಾ ಎಂಬ ಶಂಕೆಗೆ ಕಾರಣವಾಗಿದೆ. ಈ ದೃಶ್ಯ ಜಿಪ್ ಲೈನ್ ನಲ್ಲಿದ್ದ ರಿಷಿ ಭಟ್ ಎಂಬವರ ಸೆಲ್ಫಿ ವೀಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಜಿಪ್ ಲೈನ್ ಆಪರೇಟರ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ವಿಚಾರಣೆಗಾಗಿ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಎಲ್ಲರನ್ನೂ ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಜಿಪ್‌ಲೈನ್ ಆಪರೇಟರ್‌ನನ್ನು ಈಗ ಮತ್ತೆ ಕರೆಸಲಾಗಿದ್ದು, ಏಜೆನ್ಸಿಗಳು ಆತನ ವಿಚಾರಣೆ ನಡೆಸಲಿವೆ. ಪಹಲ್ಗಾಮ್‌ನಲ್ಲಿ ಜಿಪ್‌ಲೈನ್‌ನಲ್ಲಿ ಹೋಗುವಾಗ ರಿಷಿ ಭಟ್ ಎಂಬವರು ಸೆಲ್ಫಿ ವೀಡಿಯೋ ಮಾಡಿದ್ದು ಅದರಲ್ಲಿ ಉಗ್ರರು ದಾಳಿ ನಡೆಸುತ್ತಿರುವ ದೃಶ್ಯವೂ ಸೆರೆಯಾಗಿತ್ತು.