ಮಂಗಳೂರು: “ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಹಿಂದೂಗಳು ಕೇವಲ ತಲ್ವಾರ್ ತೋರಿಸಿದ್ರೆ ಸಾಕಿತ್ತು“ ಎಂದು ಮಂಜೇಶ್ವರದ ವರ್ಕಾಡಿಯಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ”ಪ್ರತೀ ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಬೇಕು, ಪಹಲ್ಗಮ್ ನಲ್ಲಿ ಉಗ್ರರು ಬಂದಾಗ ತಲವಾರು ತೋರಿಸಿದ್ರೆ ಸಾಕಿತ್ತು, ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಚೂರಿ ಇಟ್ಟುಕೊಳ್ಳಿ ಪೌಡರ್,ಬಾಚಣಿಗೆ ಜೊತೆಗೆ ಚೂರಿಯನ್ನೂ ಇಟ್ಟುಕೊಳ್ಳಿ“ ಎಂದು ಹೇಳಿದರು.
”6 ಇಂಚಿನ ಚೂರಿ ಯಾರು ಬೇಕಾದರೂ ಇಟ್ಟುಕೊಳ್ಳಬಹುದು ಅದಕ್ಕೆ ಯಾವುದೇ ಲೈಸೆನ್ಸ್ ಬೇಕಾಗಿಲ್ಲ. ಸಂಜೆ ಮೇಲೆ ಓಡಾಡಿದ್ರೆ ನಿಮ್ಮ ಮೇಲೆ ಖಂಡಿತಾ ಅಕ್ರಮಣ ಮಾಡುತ್ತಾರೆ. ಆಕ್ರಮಣ ಮಾಡಬೇಡಿ ಎಂದು ಬೇಡಿಕೊಂಡ್ರೆ ನಿಮ್ಮ ಕಥೆ ಮುಗಿಯಿತು ಎಂದರ್ಥ. ಅದರ ಬದಲು ಚೂರಿ ತೋರಿಸಿ ಸಾಕು ಹೆದರಿ ಓಡುತ್ತಾರೆ“ ಎಂದು ಪ್ರಭಾಕರ ಭಟ್ ಹೇಳಿದ್ದಾರೆ.
”ಹಿಂದೂ ಮುಸ್ಲಿಂ ಗಲಾಟೆ ಅಂದರೆ ಮುಸ್ಲಿಮರು ಹೊಡೀತಾರೆ ಹಿಂದೂಗಳು ಓಡುತ್ತಾರೆ ಅಂತ ಇತ್ತು, ಆದರೆ ಈಗ ಹಿಂದೂ ತಿರುಗಿ ಬಿದ್ದಿದ್ದಾನೆ ಇನ್ನು ಹೊಡಿಲಿಕ್ಕೆ ಶುರು ಮಾಡಲಿಲ್ಲ ನಾವು ಎದ್ದು ನಿಲ್ಲಬೇಕು ,ಮನೆಯಲ್ಲಿ ಎಲ್ಲರೂ ಒಂದು ಒಂದು ತಲ್ವಾರ್ ಇಟ್ಟುಕೊಳ್ಳಿ“ ಎಂದು ಹೇಳಿದ್ದಾರೆ.
ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ: