ನಿವೃತ್ತ ಡಿಜಿಪಿ ಮತ್ತು ಐಜಿಪಿ ಓಂಪ್ರಕಾಶ್ ಕೊಲೆ ಹಿಂದೆ PFIಯ ಪಾತ್ರವಿರುವ ಕುರಿತು NIA ತನಿಖೆ ಮಾಡಿ: ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ

ಮಂಗಳೂರು: ನಿವತ್ತ ಡಿಜಿಪಿ ಮತ್ತು ಐಜಿಪಿ ಓಂಪ್ರಕಾಶ್ ಹತ್ಯೆಯಾಗಿರುವುದು ಬಹಳ ದುಃಖಕರ ವಿಚಾರ. ಮೃತರ ಪತ್ನಿ ಪಲ್ಲವಿಯವರನ್ನು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು, ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡುವ ಸಲುವಾಗಿ ಆರೋಪಿಯಾಗಿ ಸಿಕ್ಕಿಸಿ ಹಾಕಿದ್ದಾರೆ ಎಂದು ಮಾಜಿ ಡಿವೈಎಸ್‌ಪಿ, ವಕೀಲೆ, ಭಾರತೀಯ ಜನಶಕ್ತಿ ಕಾಂಗ್ರೆಸ್(ರಿ.) ಇದರ ಅಧ್ಯಕ್ಷೆ ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದ್ದಾರೆ.


ಈ ಕುರಿತು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಲ್ಲವಿಯವರು ವಾಟ್ಸಾನ್ ಗ್ರೂಪ್ ನಲ್ಲಿ ಮೃತ ಒಂಪಕಾಶರವರಿಗೆ PFI ನಂಟು ಇದ ಬಗ್ಗೆ, ಉಲ್ಲೇಖ ಮಾಡಿದ್ದಾರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಾಗ ಎಲ್ಲಾ ರೀತಿಯ ಕ್ರಿಮಿನಲ್ ಗಳ ಪರಿಚಯವಾಗುತ್ತದೆ. ಆದರೆ ನಿನ್ನತ್ತರಾದ ಬಳಿಕ ಯಾವ ರೀತಿಯ ಸಂಪರ್ಕವಿತ್ತು ಎಂಬುದು ತಿಳಿಯಬೇಕಿದೆ . ಸಿದ್ದರಾಮಯ್ಯನವರ ಆಡಳಿತದಲ್ಲಿ ಪೊಲೀಸ್ ಇಲಾಖೆಯಲ್ಲಿ ಏನಾದರೂ ಕೆಲಸವಿಲ್ಲದ ಕುಳಿತಿರುವ ನಿಷೇಧಿತ ಉಗ ಸಂಘಟನೆಯಾದ ಪಿಎಫ್‌ಐ ಸದಸ್ಯರನ್ನು ನೇಮಕ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ಮಾಡಬೇಕು. ಓಂಪ್ರಕಾಶ್‌ ರವರು ಡಿಜಿಪಿ ಮತ್ತು ಐಜಿಪಿಯಾಗಿದ್ದಾಗ ಪಿಎಫ್‌ಐ ಸದಸ್ಯರನ್ನು ಇಲಾಖೆಯಲ್ಲಿ ಪೊಲೀಸ್ ಆಗಿ ನೇಮಕ ಮಾಡಲು ಒತ್ತಡವಿತ್ತೇ ಎಂದು ಪರಿಶೀಲಿಸಬೇಕು ಎಂದರು.

ಪಲ್ಲವಿ ಮತ್ತು ಮಗಳು ಕೃತಿಯವರ ಮಾನಸಿಕ ಆರೋಗ್ಯದ ಬಗೆ, ವಿಧವಿಧವಾದ ಚರ್ಚೆಯಾಗಿರುವುದನ್ನು ಗಮನಿಸಿದ್ದೇನೆ. ಪೊಲೀಸರು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಯವರ ಅಣತಿಯಂತೆ ತನಿಖೆ ಮಾಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಪಲ್ಲವಿಯವರು ತಾನು ಕೊಲೆ ಮಾಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಎಂದೂ, I have killed the monster ಎಂದು ದೂರವಾಣಿ ಕರೆ ಮಾಡಿ ಅಧಿಕಾರಿಯೊಬ್ಬರ ಪತ್ನಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದೂ ಮತ್ತು ಕೊಲೆಯಲ್ಲಿ ಮಗಳು ಕೃತಿಯ ಪಾತ್ರವಿಲ್ಲ ಎಂದೂ ಹೇಳಿದ್ದಾರೆ ಎಂದು ಹೇಳಿರುವುದನ್ನು ನಾನು ಮಾಧ್ಯಮಗಳಲ್ಲಿ ನೋಡಿರುತ್ತೇನೆ. ಶ್ರೀಮತಿ ಪಲ್ಲವಿಯವರು I have killed the monster ಎಂದು ಹೇಳಿದ್ದನ್ನು ನಂಬುವ ಪೊಲೀಸರು ಕೊಲೆಯಲ್ಲಿ ಮಗಳು ಕೃತಿಯ ಪಾತ್ರವಿಲ್ಲ ಎಂದು ಆ ತಾಯಿ ಹೇಳಿದ್ದನ್ನು ಯಾಕೆ ನಂಬುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಅಪಾರವಾದ ಪ್ರೀತಿ ಇರುತ್ತದೆ. ತಂದೆಯನ್ನು ಒಂದು ಕ್ಷಣವೂ ಬಿಟ್ಟಿರಲಾರದ ಮಗಳು ಅಪ್ಪನನ್ನು ಅವರ ಸಹೋದರಿಯ ಮನೆಯಿಂದ ಕರೆ ತಂದಿದ್ದಾಳೆ ಅಷ್ಟೆ. ತಂದ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಆಘಾತಕ್ಕೊಳಗಾದ ಮಗಳನ್ನು ಕೊಲೆ ಮಾಡಲೆಂದೇ ಮನೆಗೆ ಕರೆತಂದಿದ್ದು ಎಂದು ಹೇಳಲು ಹಿಂಸಿಸಿ, ಹಿಂಸಿಸಿ ನಿಮ್ಮಾನ್‌ಗೆ ದಾಖಲಾಗುವಂತೆ ಮಾಡಿದ್ದೀರಿ. ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ಒಬ್ಬ ಹೆಣ್ಣು ಮಗಳನ್ನು ಹಿಂಸಿಸಿದ ನಿಮ್ಮ ಮನಸ್ಥಿತಿಗೆ ನಿಜವಾಗಿಯೂ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಆರೋಪಿಸಿದರು.

ಕೊಲೆ ಮಾಡಿದ್ದನ್ನು ನೋಡಿರುವ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿದ್ದ ಬಗ್ಗೆ ಮಾಹಿತಿ ಇಲ್ಲ ಯಾವುದೇ CCTV footage ಸಿಕ್ಕ ಬಗ್ಗೆ, ಮಾಹಿತಿ ಇಲ್ಲ. ಕೇವಲ ಪಲ್ಲವಿಯವರು ಹೇಳಿದ ಮಾತನ್ನು ಆಧರಿಸಿ ಆಕೆಯನ್ನು ಆರೋಪಿ ಮಾಡಲಾಗಿದೆ. ಒಂದು ವೇಳೆ ಪಲ್ಲವಿಯವರು ಹೇಳಿದಂತೆ ಶ್ರೀ ಓಂಪ್ರಕಾಶ್‌ರವರನ್ನು ಅವರಿಗೆ ನಂಟಿದ್ದ PFI memberಗಳ ಕೊಲೆ ಮಾಡಿ ಅಕೆಯನ್ನು ಬೆದರಿಸಿ ಬೇರೊಬ್ಬ ಪೊಲೀಸ್ ಅಧಿಕಾರಿಯ ಪತ್ನಿಗೆ ಫೋನ್ ಮಾಡಿಸಿ have killed the monster ಎಂದು ಹೇಳಿಸಿ, ಈ ಕೊಲೆಯ ಬಗ್ಗೆ, ಎಲ್ಲಾದರೂ ಬಾಯಿ ಬಿಟ್ರೆ ನಿನ್ನ ಮಗಳನ್ನೂ, ನಿನ್ನ ಮಗ ಮತ್ತು ಆತನ ಕುಟುಂಬವನ್ನೂ ಕೊಲೆ ಮಾಡುತ್ತೇವೆ ಎಂದು ಬೆದರಿಸಿದರೆ ಶ್ರೀಮತಿ ಪಲ್ಲವಿಯವರು ಗಂಡ ಹೇಗೂ ಸಾಯೋದು ಸತ್ಯ. ಇನ್ನು ಈ ಪಿಎಫ್‌ಐ ಮೆಂಬರ್ಸ್‌ಗಳಿಂದಾಗಿ ನನ್ನ ಮಗಳು ಮತ್ತಯ ಮಗನಿಗೆ ತೊಂದರೆಯಾಗುವುದು ಬೇಡ ಎಂದು ಹೆದರಿ ಪೊಲೀಸರಿಗೆ ಸುಳ್ಳು ಹೇಳಿರುವ ಸಾಧ್ಯತೆ ಇಲ್ಲಿ ನನಗೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಅಂತೆಯೇ ಓಂ ಪ್ರಕಾಶ್‌ ಪುತ್ರ ಕಾರ್ತಿಕೇಶ್‌ ಕಾಂಗ್ರೆಸ್‌ ನೇತೃತ್ವದ ಸರಕಾರದ ಯಾವುದೇ ಬೆದರಿಕೆಗೆ, ಆಮಿಷಕ್ಕೆ ಒಳಗಾಗಗದೆ ತಂದೆಯ ಸಾವಿನಿಂದ ಒಂಟಿಯಾಗಿರುವ ತಾಯಿ ಮತ್ತು ಸಹೋದರಿಯನ್ನು ಯಾವುದೇ ಕಾರಣಕ್ಕೂ ಬಿಡದೆ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಇಲಾಖೆಯ ಕಾನ್ಸ್‌ಸ್ಟೇಬಲ್ ಮತ್ತು PSIಗಳು ನನಗೆ ಕರೆ ಮಾಡಿ ಅಳುತ್ತಿದ್ದಾರೆ. ಇಷ್ಟುದಿನ ಇಲಾಖೆಯಲ್ಲಿ ಮೇಲಾಧಿಕಾರಿಗಳ ಕಾಟವಿದ್ದರೂ ಮನೆಗೆ ಹೋಗಿ ನೆಮ್ಮದಿಯಿಂದ ಮಲಗಲಾದರೂ ಸಾಧ್ಯವಿತ್ತು, ಡಿಜಿಯವರ ಹತ್ಯೆಯಾದಾಗಿನಿಂದ ಮನೆಗೆ ಹೋಗಿ ಮಲಗಲೂ ಸಹ ಭಯವಾಗುತ್ತಿದೆ. ಎಲ್ಲಿ ಹೆಂಡತಿ ಬಂದು ಚಾಕುವಿನಿಂದ ಚುಚ್ಚಿ ಬಿಡುತ್ತಾಳೋ ಎಂದು ಕಣ್ಣು, ಬಿಟ್ಟು ಕೊಂಡೇ ಇರುವಂತಾಗಿದೆ ಎಂದು ಇಲಾಖೆಯ ಸಿಬ್ಬಂದಿ ಮತ್ತು PSIಗಳು ನನಗೆ ಕರೆ ಮಾಡಿ ದುಃಖ ಹಂಚಿಕೊಳ್ಳುತ್ತಿದ್ದಾರೆ. PFI themberrಗಳನ್ನು ರಕ್ಷಿಸುವ ಉದ್ದೇಶದಿಂದ ಡಿಜಿಪಿಯವರ ಪತ್ನಿ ಮತ್ತು ಮಗಳು ಸೇರಿ ಕೊಲೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡುವ ಮೂಲಕ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಪೊಲೀಸ್ ಇಲಾಖೆಯ ಸ್ಥೈರ್ಯವನ್ನೇ ಅಡಗಿಸಿ ಬಿಟ್ಟಿದ್ದಾರೆ ಎಂದು ಅನುಪಮ ಆರೋಪಿಸಿದರು.

ಈ ಹಿಂದೆ ಡಿವೈಎಸ್ಪಿ ಎಂ.ಕೆ.ಗಣಪತಿಯವರ ಸಾವಿನ ಸಂದರ್ಭದಲ್ಲಿಯೂ ಕೂಡ ಒಬ್ಬ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ್ರು ಮಂತ್ರಿಯನ್ನು ರಕ್ಷಿಸುವ ಉದ್ದೇಶದಿಂದ ಅವರು ಹೆಂಡತಿಯಿಂದಾಗಿ ಸತ್ತ ಎಂದು ಪ್ರಕರಣವನ್ನು ಮುಚ್ಚಲಾಗಿತ್ತು. ಮತ್ತು ಅಂದು ಗೃಹ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ರವರು ವಿಧಾನಸಭೆಯಲ್ಲಿ ಈ ಬಗ್ಗೆ, CID ವರದಿಯನ್ನು ಓದಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಅಲ್ಪ ಸಂಖ್ಯಾತರ ಓಲೈಕೆ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಭಯೋತ್ಪಾದಕ ದಾಳಿಯಿಂದ ಶಾಸಕರು ಮತ್ತು ಮಂತ್ರಿಗಳು ಸತ್ತರೆ ಆಗ ಪೊಲೀಸ್ ಇಲಾಖೆಯೊಳಗೆ ನುಸುಳಿಕೊಂಡಿರುವ PFI memberಗಳು ಶಾಸಕರು ಮತ್ತು ಮಂತ್ರಿಗಳು ಹೆಂಡತಿಯಿಂದಾಗಿ ಸತ್ತ, ಗರ್ಲ್ ಫ್ರೆಂಡಿನಿಂದಾಗಿ ಸತ್ತ ಎಂದು ತನಿಖೆ ಮುಕ್ತಾಯಗೊಳಿಸುವ ದಿನವೂ ದೂರವಿಲ್ಲ ಎಂದು ಹೇಳಿದರು.

ಅಂತಹ ದಿನಗಳು ಬಾರದಿರಲಿ ಎಂದು ಕುದ್ರೋಳಿಯ ಗೋಕರ್ಣನಾಥೇಶ್ವರನಲ್ಲಿ ಪ್ರಾರ್ಥಿಸುತ್ತೇನೆ. ಓಂಪ್ರಕಾಶ್ ರವರ ಹತ್ಯೆಯಲ್ಲಿ PFI memberಗಳ ಕೈವಾಡ ಇರುವ ಬಗ್ಗೆ, ತನಿಖೆ ಮಾಡಲು ಈ ಕೊಲೆ ಪ್ರಕರಣವನ್ನು NIA ತನಿಖೆಗೆ ವರ್ಗಾಯಿಸಲು ವಿರೋಧ ಪಕ್ಷದ ನಾಯಕರು ಒತ್ತಾಯ ಪಡಿಸಬೇಕು ಎಂದು ಆಗ್ರಹಿಸಿದರು.

ಜತೆಗೆ ಓಂಪ್ರಕಾಶ್ ರವರ ಕೊಲೆ ಪ್ರಕರಣದಲ್ಲಿ ಯಾವ ರೀತಿ PFI memberಗಳ ಕೈವಾಡವಿದೆ ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿ ಕರ್ನಾಟಕ ಪೊಲೀಸ್ ಇಲಾಖೆಯ ಈಗಿನ ಡಿಜಿಪಿ ಮತ್ತು ಐಜಿಪಿಯಾಗಿರುವ ಶ್ರೀ ಅಲೋಕ್ ಮೋಹನ್ ರವರಿಗೆ ಪತ್ರವನ್ನೂ ಬರೆದಿರುತ್ತೇನೆ. ಇನ್ನಾದರೂ ಅಲ್ಪಸಂಖ್ಯಾತರ ಓಲೈಕೆಗಾಗಿ ದಲಿತ ಸಮುದಾಯಕ್ಕೆ ಸೇರಿದ ಪೊಲೀಸ್ ಅಧಿಕಾರಿಗಳನ್ನು, ಅವರ ಮನೆಯ ಮಹಿಳೆಯರನ್ನು ಬಲಿ ನೀಡುವುದನ್ನು ನಿಲ್ಲಿಸಿರಿ ಎಂದು ಕೈಜೋಡಿಸಿ ಮುಖ್ಯಮಂತ್ರಿಗಳಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ಅನುಪಮಾ ಶೆಣೈ ಮನವಿ ಮಾಡಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಕಣ್ಣೀರು ಹಾಕಿದ ಅನುಪಮಾ ಶೆಣೈ


ಓಂಪ್ರಕಾಶ್‌ ಹತ್ಯೆಯನ್ನು ನೆನೆದು ಕಣ್ಣೀರು ಸುರಿಸಿದ ಅನುಪಮಾ ಶೆಣೈ, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಗೊಂದಲಕಾರಿ ಉತ್ತರವನ್ನು ನೀಡಿದ್ದಾರೆ.
2016ರಲ್ಲಿ 2 ಬಾರಿ ನನ್ನ ಇಶ್ಯೂವನ್ನು ಮೀಡಿಯಾದಲ್ಲಿ ರೈಸ್‌ ಮಾಡಿದರು. ಅಂದು ನಡೆದ ಕೊಲೆ ಪ್ರಕರಣದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ನನ್ನ ಟ್ರಾನ್ಸ್‌ಫರ್‌ ಮಾಡಿದರು. ಇದರಿಂದ ನಾನು ಆರು ತಿಂಗಳಲ್ಲಿ ರಿಸೈನ್‌ ಮಾಡಬೇಕಾಗಿ ಬಂದಿತು. ಆಗ ನಾನು ಮಂತ್ರಿ ರಾಜನಾಥ್‌ ಸಿಂಗ್‌, ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೆ ಎಂದು ಕಣ್ಣೀರು ಹಾಕಿದರು. ನನ್ನ ಮೂರು ಆಡಿಯೋಗಳ ಪೈಕಿ ಬಿಡುಗಡೆ ಮಾಡಿದ್ದು, ಪ್ರಧಾನ ಮಂತ್ರಿಗೆ ಬರೆದ ಪತ್ರವನ್ನು. ಓಂಪ್ರಕಾಶ್‌ ರಾವ್‌ ಆಡಿಯೋ, ಪಿ.ಟಿ. ಪರಮೇಶ್ವರ್‌ ಆಡಿಯೋ ಹಾಗೂ ಮುರುಗನ್‌ ಅವರ ಆಡಿಯೋವನ್ನು ರಿಲೀಸ್‌ ಮಾಡಿದ್ದೆ. ಅದರಲ್ಲಿ ಒಬ್ಬರು ಕೊಲೆಯಾಗಿದ್ದಾರೆ. 2016ರಲ್ಲಿ ನಡೆದ ಘಟನೆಯನ್ನು ಅಡ್ರೆಸ್‌ ಮಾಡಿದ್ದರೆ ಇಂದು ಒಬ್ಬ ವ್ಯಕ್ತಿ ಕೊಲೆಯಾಗುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದರು.
ಎಲ್ಲಾ ಪ್ರಕರಣವನ್ನು ಒಂದೊಂದೇ ಹೊರಗೆ ತರುತ್ತೇನೆ. ನಾನು ಡಿಜಿಪಿ, ಐಜಿಪಿಯಾಗಿರುವ ಅಲೋಕ್‌ ಕುಮಾರ್‌ಗೆ ಬರೆದ ಪತ್ರವನ್ನು ಸಿಸಿಬಿ ಇನ್ವೆಸ್ಟಿಗೇಟಿವ್‌ ಆಫೀಸರ್‌ಗೆ ಕೊಡ್ಲೇಬೇಕು. ಈ ಪ್ರಕಣದಲ್ಲಿ ಡಿಜಿಪಿಯವರು ಪಲ್ಲವಿ ಹಾಗೂ ಕೃತಿಯನ್ನು ತನಿಖೆ ಮಾಡಿದಂತೆ ಮುಖ್ಯಮಂತ್ರಿ, ಗೃಹಮಂತ್ರಿಯವರನ್ನೂ ವಿಚಾರಣೆ ಮಾಡಬೇಕು. ಆಗ ಸತ್ಯವೇನೆಂದು ಗೊತ್ತಾಗುತ್ತೆ. ಕೃತಿ ಹಾಗೂ ಪಲ್ಲವಿಯನ್ನು ಜೈಲಿಗೆ ಹಾಕಿದ್ದು ಯಾಕೆ? ರಾಜಕಾರಣಿಗಳನ್ನು ವಿಚಾರಣೆ ಮಾಡಲು ಪೊಲೀಸರಿಗೆ ಸಾಧ್ಯವಿಲ್ಲವೇ? ಅವರಲ್ಲಿ ಪುರಾವೆ ಇದೆಯೇ? ಎಂದು ಪ್ರಶ್ನಿಸಿದರು.

 

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

error: Content is protected !!