ಮಂಗಳೂರು: ಸೇಂಟ್ ಆಗ್ನೆಸ್ ಮತ್ತು ಬೆಂದೂರ್ ಚರ್ಚ್ ಎದುರು ಇರುವ INLAND BUILDERS ನವರ ಬ್ಯೂನಸ್ ಐರಿಸ್( INLAND Buenos Aires) ವಸತಿ ಸಮುಚ್ಛಯ ಇಂದು ಬೆಳಿಗ್ಗೆ 10.30ರ ಸುಮಾರಿಗೆ ಕ್ರೈಸ್ತ ಹಾಗೂ ಹಿಂದೂ ಪೂಜಾ ವಿಧಾನ ಪದ್ಧತಿಯಲ್ಲಿ ಉದ್ಘಾಟನೆಗೊಂಡಿತು.
ಸೈಂಟ್ ಸೆಬಾಸ್ಟಿಯನ್ ಚರ್ಚ್ ನ (ವಿಕಾರ್) ಧರ್ಮಗುರು ವಂ.ವಾಲ್ಟರ್ ಡಿಸೋಜ ಆಶೀರ್ವಚನದೊಂದಿಗೆ ಪ್ರಾರ್ಥನೆ ನೆರವೇರಿಸಿದರು. ಅರ್ಚಕ ಗಿರಿಧರ ಭಟ್ ಗಣಹೋಮ ನೆರವೇರಿಸಿದರು. ಮೌಲಾನ ಮುಹಮ್ಮದ್ ಕಾಮಿಲ್ ಸಖಾಫಿ ದುಆ ನೆರವೇರಿಸಿದರು.
ವಿಕಾರ್ ಆಫ್ ಸೈಂಟ್ ಸೆಬಾಸ್ಟಿಯನ್ ಚರ್ಚ್ ಇದರ ಧರ್ಮಗುರುಗಳಾದ ರೆವೆರೆಂಡ್ ಫಾದರ್ ವಾಲ್ಟರ್ ಡಿಸೋಜಾ ಅವರು ಪ್ರಭು ಕ್ರಿಸ್ತನ ಬೈಬಲ್ ವಾಣಿಗಳನ್ನು ಉಲ್ಲೇಖಿಸಿ ಸಮುಚ್ಛಯವನ್ನು ಪವಿತ್ರಗೊಳಿಸಿದರು. ಕಟ್ಟಡ ಆರಂಭಗೊಂಡಂದಿನಿಂದ ಅಂತ್ಯದವರೆಗೂ ಯಾವುದೇ ಅಪಾಯ ಸಂಭವಿಸದಂತೆ ದೇವರು ನಮ್ಮನ್ನು ಹರಸಿದ್ದಾರೆ. ಈ ಕಟ್ಟಡಕ್ಕಾಗಿ ಶ್ರಮಿಸಿದ ಎಲ್ಲಾ ಕಾರ್ಮಿಕರನ್ನು ದೇವರು ಆಶೀರ್ವಾದಗೊಳಿಸಲಿ. ತಂದೆಯೇ ಈ ಕಟ್ಟಡವನ್ನು ನಮ್ಮ ಉಪಯೋಗಕ್ಕಾಗಿ ಮಾತ್ರವಲ್ಲದೆ. ನಿಮ್ಮ ಪ್ರೀತಿಯ ಕುಮಾರರ ಆಶ್ರಯ ತಾಣವಾಗಿ, ಆನಂದದ ತಾಣವಾಗಲಿ ಎಂದು ಆಶೀರ್ವದಿಸಿ, ಕೊನೆಯ ತನಕ ಈ ಕಟ್ಟಡ ನಮ್ಮ ಸಂತೋಷಕ್ಕಾಗಿ ಉಳಿದು ನಿಮ್ಮ ಸ್ತುತಿಗೆ ಪಾತ್ರವಾಗಲಿ ಎಂದು ಆಶೀರ್ವಚನ ನುಡಿದರು. ಈ ಸಂದರ್ಭದಲ್ಲಿ ಅವರು ಬೈಬಲ್ ಉಕ್ತಿಗಳನ್ನು ಉಲ್ಲೇಖಿಸಿ ಕೃತಜ್ಞತೆ ಸಲ್ಲಿಸಿದರು.
ಚೇರ್ಮಾನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಸಿರಾಜ್ ಅಹ್ಮದ್ ಅವರು ವಸತಿ ಸಮುಚ್ಛಯದ ಲೋಕಾರ್ಪಣೆ ನಡೆಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಮೇರಜ್ ಯೂಸಫ್. ವಹಾಜ್ ಯೂಸಫ್, ಡೈಜಿ ವಲ್ಡ್‌ನ ವಾಲ್ಟರ್ ನಂದಳಿಕೆ ಮತ್ತಿತರರಿದ್ದರು.
ಈ ವಸತಿ ಸಮುಚ್ಛಯ ಮಂಗಳೂರಿನ ಹೃದಯ ಭಾಗ ಬೆಂದೂರ್‌ವೆಲ್‌ನಲ್ಲಿದ್ದು ಸಮೀಪದಲ್ಲಿ ಶಾಲಾ ಕಾಲೇಜು, ಆಸ್ಪತ್ರೆಗಳಿವೆ. ಇದು 4 ಮಹಡಿಗಳಲ್ಲಿ 36 ಪ್ರೀಮಿಯಂ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದ್ದು, ಪರಿಸರದಲ್ಲಿ ಪ್ರಶಾಂತತೆ ನೆಲೆಸಿದೆ.
ವಿಶೇಷತೆಗಳು
-ಪ್ರತಿ ಮಹಡಿಯಲ್ಲಿ 9 ಫ್ಲಾಟ್‌ಗಳು (2 BHK & 3 BHK)
-ಎರಡು ಸ್ವಯಂಚಾಲಿತ ಎಲಿವೇಟರ್‌ಗಳು (8 ಮತ್ತು 13 ಪ್ರಯಾಣಿಕರು)
-ಸಿಸಿಟಿವಿ ಸೌಲಭ್ಯ.
– ಟೆರೇಸ್ ಮಹಡಿಯಲ್ಲಿ ಜಿಮ್ನಾಷಿಯಂ/ಯೋಗ ಸ್ಥಳ
-ವಿಶಾಲವಾದ ಪ್ರವೇಶ ಲಾಬಿ
- ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್
– ಅಪಾರ್ಟ್‌ಮೆಂಟ್ ಲೈಟಿಂಗಾಗಿ ಜನರೇಟರ್ ಬ್ಯಾಕಪ್
– ಇಂಟರ್‌ಕಾಮ್ ಪ್ರಾವಿಷನ್
- ಅಗ್ನಿಶಾಮಕ ವ್ಯವಸ್ಥೆ
-ವಿಶಾಲವಾದ ಕಾರ್ ಪಾರ್ಕಿಂಗ್
-ವಿಶಾಲವಾದ ಮಕ್ಕಳ ಆಟದ ಮೈದಾನ