ಉರುಂದಾಡಿ: ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಉರುಂದಾಡಿ ಅಂಗನವಾಡಿ ಕೇಂದ್ರವನ್ನು 16.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಪಾಲಿಕೆ ವಾರ್ಡ್ 15 ರ ಉರುಂದಾಡಿಯಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡದ ಬೇಡಿಕೆಯಿತ್ತು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಹಿಂದೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲಾ ಕಡೆಯಿಂದಲೂ ಸ್ವಂತ ಕಟ್ಟಡಕ್ಕೆ ಒಲವು ಇದೆ. ಅಧಿಕಾರಿಗಳು ಇದನ್ನು ಗುರುತಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಬೂತ್ ಅಧ್ಯಕ್ಷ ದೀಪಕ್, ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಂಡಲ ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್, ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ. ಮಹಾಶಕ್ತಿ ಕೇಂದ್ರ ಅಧ್ಯಕ್ಷಸಿತೇಶ್ ಕೊಂಡೆ, ಪ್ರಧಾನ ಕಾರ್ಯದರ್ಶಿ ಉಮೇಶ್ ಬಂಗ್ರಕುಳೂರು, ವಾರ್ಡ್ ಅಧ್ಯಕ್ಷ ಪ್ರಜೇಶ್ ಶೆಟ್ಟಿ ಬೂತ್ ಅಧ್ಯಕ್ಷದೀಪಕ್, ಪ್ರಮುಖರಾದ ಗಣೇಶ್ ಶೆಟ್ಟಿ ಸಂದೀಪ್, ಕವಿನ್ ಪೂಚಾರಿ, ಅಂಗನವಾಡಿ ಸಿಡಿಪಿಒ ಶ್ವೇತಾ, ಅಂಗನವಾಡಿ ಅಧ್ಯಾಪಕಿ, ಸಹಾಯಕಿರು, ಸ್ಥಳೀಯ ಜನರು ಉಪಸ್ಥಿತರಿದ್ದರು.