ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮಂಗಳೂರು ಲಾಲ್ ಬಾಗ್ ಮಹಾತ್ಮ ಗಾಂಧಿ ಪ್ರತಿಮೆ ಎದುರುಗಡೆ ಮೊಂಬತ್ತಿ ಹಿಡಿದು ಮೌನ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ನವಾಝ್ ಅವರು ಮಾತನಾಡಿ ಈ ದೇಶಕ್ಕೆ ಮಾರಕವಾಗುವಂತ ಕೃತ್ಯ ಯಾರೇ ಮಾಡಿದರೂ ಅವರನ್ನು ಎಲ್ಲರೂ ಒಂದುಗೂಡಿ ಹಿಮ್ಮಟ್ಟಿಸುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಮಾಜಿ ಮೇಯರ್ ಕೆ ಅಶ್ರಫ್ ಮಾತನಾಡಿದರು, ಯುವ ಕಾಂಗ್ರೆಸ್ ಜಿಲ್ಲಾ ಪದಾಧಿಕಾರಿಗಳಾದ ದೀಕ್ಷಿತ್ ಅತ್ತಾವರ್,ಬಶೀರ್ ಕಣ್ಣೂರ್, ಸಪನಿತ್ ಡೇಸಾ, ಪವನ್ ಸಾಲ್ಯಾನ್, ವಿಶಾಲ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಸುಹೈಲ್ ಕಂದಕ್, ರಮಾನಂದ ಪೂಜಾರಿ, ನಝೀರ್ ಬಜಾಲ್, ಪೃತ್ವಿ ಪೂಜಾರಿ, ವೆಲ್ವಿನ್, ಜಾಕ್ಸನ್ ಮೂಡಬಿದ್ರೆ, ಕ್ರಿಸ್ತನ್ ಮೆನೆಸೆಸ್, ವಿನಯ್ ಕುಮಾರ್ ಸಿಂದ್ಯ, ಪ್ರಜ್ವಲ್ ಶೆಟ್ಟಿ, ಮುಹಮ್ಮದ್ ಇಶಾಮ್ ಉಪಸ್ಥಿತರಿದ್ದರು.