ಸುರತ್ಕಲ್: ದೇವಾಲಯಗಳು ಮುಗ್ಧತನ ಮತ್ತು ತಜ್ಞತನದ ಸಂಕೇತವಾಗಿದೆ. ದೇವಸ್ಥಾನ ಮೌನ ಮತ್ತು ಧ್ಯಾನದ ಕೇಂದ್ರವಾಗಬೇಕು. ಜ್ಞಾನ ತಾಣವಾಗಬೇಕು. ಅಗ ಮಾನ ಬರುತ್ತದೆ. ಆ ದೇವಳದಲ್ಲಿ ಆಧ್ಯಾತ್ಮಿಕ ಜಾಗೃತಿ ಆಗಮಿಸುತ್ತದೆ ಎಂದು ಉಪನ್ಯಾಸಕ ಅರುಣ್ ಉಳ್ಳಾಲ್ ಹೇಳಿದರು.
ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಇಲ್ಲಿ ಚೂರ್ಣೋತ್ಸವ, ರಾತ್ರಿ ರಥೋತ್ಸವ, ಓಕುಳಿ ಸವಾರಿಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ದೇವಾಲಯಗಳು ಆಧ್ಯಾತ್ಮದತ್ತ ಬೆಳಕು ತೋರುವ ಶ್ರದ್ದಾ ಕೇಂದ್ರಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು. ಪಂಕ್ತಿ ಬೇಧ ಇಲ್ಲದೆ ಒಂದೇ ಅಡುಗೆ ಇರುವ ಕೇಂದ್ರ ಗಣೇಶಪುರ ಎಂದು ಅವರು ಕೊಂಡಾಡಿದರು.
ಶ್ರೀ ವಿದ್ಯೇಂದ್ರ ಶ್ರೀಪಾದ ಚಿತ್ರಾಪುರ ಮಠ ಕುಳಾಯಿ ಇವರ ಸಾನಿಧ್ಯದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ದೀಪ ಪ್ರಜ್ವಲಿಸಿದರು.
‘ಅಜ್ಞಾನದ ಅಂಧಕಾರವನ್ನು ಆಧ್ಯಾತ್ಮ ಮೂಲಕ ಪರಿಹರಿಸಿಕೊಳ್ಳಬೇಕು. ಶ್ರಮಜೀವಿಗಳಿಂದ ನಿರ್ಮಾಣವಾದ ಗಣೇಶಪುರ ಗಣಪತಿ ದೇವರು ಈ ಪ್ರದೇಶವನ್ನು ಶ್ರೀಮಂತ ಗೊಳಿಸಿದ್ದಾರೆ ‘ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಎಸ್ ಡಿ ಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ ಸಭಾಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸಂಜೀವ ಎಂ. ಶೆಟ್ಟಿ, ಸುಜಿತ್ ಆಳ್ವ ಏತಮೊಗರು ಗುತ್ತು, ಬಾಲಚಂದ್ರ, ಚಂದ್ರಗಿರಿ ಮದ್ಯ, ಸಂತೋಷ್ ಕುಮಾರ್ ರೈ ಬೋಳಿಯಾರ್, ಜಯರಾಮ್ ಶಂಭು ಮಲ್ಲಿ ಮದ್ಯ, ಗುರಿಕಾರ ಶ್ರಿನಿವಾಸ ಶೆಟ್ಟಿಗಾರ್ ಕಾಟಿಪಳ್ಳ, ರೋಹಿಣಿ ರಾಧಾಕೃಷ್ಣ ರಾವ್, ಅಧ್ಯಕ್ಷರು ಭಗಿನೀ ಸೇವಾ ಸಮಾಜ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಸ್ವಾಗತಿಸಿ, ಪ್ರಸ್ತಾಪಿಸಿದರು. ವಿಜಯ ಕುಕ್ಯಾನ್ ಪ್ರಾರ್ಥಿಸಿದರು. ಸುಧಾಕರ ಕಾಮತ್ ನಿರೂಪಿಸಿದರು.