‘ಏಪ್ರಿಲ್ 15ನೇ ತಾರೀಕು ಯತ್ನಾಳ್‌ಗೆ ಫೈನಲ್ ಡೇ’ ಆಡಿಯೋ ವೈರಲ್!

ವಿಜಯಪುರ: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಲೆ ಸಂಚು ರೂಪಿಸಲಾಗಿದೆ ಎಂಬ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೆ ಈ ಆಡಿಯೋ ವೈರಲ್ ಆಗಿದೆ. ‘ಏಪ್ರಿಲ್ 15ನೇ ತಾರೀಕು ಯತ್ನಾಳ್‌ಗೆ ಫೈನಲ್ ಡೇ’ ಎಂದು ಆಡಿಯೋದಲ್ಲಿ ಹೇಳಲಾಗಿದ್ದು ವಿಜಯಪುರದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಆಡಿಯೋದಲ್ಲಿ ‘ಈ ಬಾರಿ ಯತ್ನಾಳ್‌ಗೆ ಫೈನಲ್ ಡೇ. ಅರೆಸ್ಟ್ ಆಗಬೇಕು ಇಲ್ಲ ತಲೆ ಕತ್ತರಿಸಬೇಕು. ಏಪ್ರಿಲ್ 15ನೇ ತಾರೀಕು ಯತ್ನಾಳ್‌ಗೆ ಫೈನಲ್ ಡೇ. ಅಂದು ಯತ್ನಾಳ್ ನೇರವಾಗಿ ಜನ್ನತ್‌ಗೆ ಹೋಗುತ್ತಾನೆ. ಯತ್ನಾಳ್ ದಿ ಎಂಡ್’ ಎನ್ನುವ ಯುವಕನೋರ್ವನ ಆಡಿಯೋ ವೈರಲ್ ಆಗಿದೆ.

ವಿಜಯಪುರದ ಬಸ್‌ ಸ್ಟ್ಯಾಂಡ್ ಪಕ್ಕದಲ್ಲಿ ಇರುವ ಆಲಂಗೀರ್ ಹಾಲ್‌ನಲ್ಲಿ ಮುಸ್ಲೀಂ ಮುಖಂಡರ ಸಭೆ ಮಾಡಲಾಗಿತ್ತು. ಇಲ್ಲಿ ಎಂಎಂಸಿ ಸದಸ್ಯರು ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು, ದಿಗ್ಗಜ ಮುಸ್ಲಿಂ ಮುಖಂಡರು ಸೇರಿದ್ದರು. ಈ ಸಭೆಯಲ್ಲಿ ಇದೇ 15ನೇ ತಾರೀಕು ಬೃಹತ್ ಆದ ಹೋರಾಟವನ್ನು ಅಂಬೇಡ್ಕರ್ ವೃತ್ತದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ. ಅಂಬೇಡ್ಕರ್ ವೃತ್ತದಲ್ಲಿ ಎಲ್ಲರೂ ಕೂಡ ಬೆಳಗ್ಗೆ 10 ಗಂಟೆ ಸುಮಾರಿಗೆ ಸೇರಬೇಕು. ಅದರ ಜೊತೆಗೆ ಯತ್ನಾಳ್ ಅರೆಸ್ಟ್ ಆಗಬೇಕು. ಇಲ್ಲವಾದಲ್ಲಿ ಯತ್ನಾಳ್ ಮನೆಗೆ ಮುತ್ತಿಗೆ ಹಾಕೋಣ. ಇದಕ್ಕಾಗಿ ನಿಮ್ಮ ಎಲ್ಲಾ ಸಹೋದರ ಸಹೋದರಿಯರು ಸೇರಿದಂತೆ ನಿಮ್ಮ ಅಕ್ಕಪಕ್ಕದ ಊರುಗಳಲ್ಲಿ ಇರುವ ಸಹೋದರ ಸಹೋದರಿಯನ್ನ ಕರೆದುಕೊಂಡು ಸೇರಬೇಕು’ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಏಪ್ರಿಲ್ 7 ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಯತ್ನಾಳ್ ಅವರು, ”ಪ್ರವಾದಿ ಮುಹಮ್ಮದ್ ಬಾಳಾ ಸಾಹೇಬ್ ಠಾಕ್ರೆ ಅವರ ಮನೆಯಲ್ಲಿ ಜನಿಸಿದರು” ಎಂದು ವಿವಾದ ಸೃಷ್ಟಿಸಿದ್ದರು.

error: Content is protected !!