ಸುರತ್ಕಲ್: ಎಂ,ಅರ್,ಪಿ,ಎಲ್ ಒ,ಎನ್ ಜಿ,ಸಿ ಕರ್ಮಚಾರಿ ಸಂಘ ಮತ್ತು ಯುವಕ ಮಂಡಲ ಕೃಷ್ಣಾಪುರ ವತಿಯಿಂದ ಇತ್ತೀಚಿಗೆ ಮುಖ್ಯ ಮಂತ್ರಿ ಪದಕ ದೊರಕಿದ ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಮಹೇಶ್ ಪ್ರಸಾದ್ , ಪಿ.ಎಸ್.ಐ ರಾಘವೇಂದ್ರ ನಾಯಕ್,ಕಾನ್ಸಟೇಬಲ್ ಅಣ್ಣಪ್ಪ, ಉಮೇಶ್ ಅವರನ್ನು ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು.

ಕೃಷ್ಣಾಪುರ ಯುವಕ ಮಂಡಲದ ಗೌರವಾಧ್ಯಕ್ಷರಾದ ಪ್ರಶಾಂತ್ ಮುಡಾಯಿಕೊಡಿ, ವಕೀಲರಾದ ಸುಜಯ್ ಶೆಟ್ಟಿ, ಕರ್ಮಚಾರಿ ಸಂಘದ ಉಪಾಧ್ಯಕ್ಷ ಪ್ರಸಾದ್ ಅಂಚನ್,ಕೋಶಾಧಿಕಾರಿ ಪುರುಷೋತ್ತಮ, ಎಸ್ ಸಿ ಮೋರ್ಚ ವಿಭಾಗದ ಅಧ್ಯಕ್ಷ ಸಂತೋಷ್, ಸದಸ್ಯರಾದ ಸಕಿತ್ ಮುಂಚೂರು, ಸಂತೋಷ್, ಪ್ರದೀಪ್, ಪೃಥ್ವಿರಾಜ್ ಕಡಂಬೋಡಿ, ಸುರತ್ಕಲ್ ಠಾಣೆಯ ಉಪಠಾಣಾಧಿಕಾರಿ ರಘನಾಯಕ್ ಉಪಸ್ಥಿತರಿದ್ದರು.