ಚಾರಿಟಿ ಟ್ರೋಫಿ 2025: ಪಾಲಡ್ಕ ವಿನ್ನರ್, ಪೆರ್ಮನೂರ್ ರನ್ನರ್

ಉಳ್ಳಾಲ: ವೆಲ್ಫೇರ್ ಏಸೋಸಿಯೇಷನ್ ರಾಣಿಪುರ ಇವರ ಮುಂದಾಳತ್ವದಲ್ಲಿ, ಪಾದರ್ ಮುಲ್ಲರ್ ಹೋಮಿಯೋಪತಿ ಮೈದಾನ ದೇರಲಕಟ್ಟೆ ಇಲ್ಲಿ ನಡೆದ ಇಂಟರ್ ಪ್ಯಾರಿಷ್ ಚ್ಯಾರಿಟಿ ಟ್ರೋಫಿ ಕ್ರಿಕೆಟ್ ಪಂದ್ಯಾಟಗಳಲ್ಲಿ ಸೇಂಟ್ ಲೋಯೋಲಾ ಚರ್ಚ ಪಾಲಡ್ಕಾ ವಿನ್ನರ್ ಆಗಿದ್ದು, ಸೇಂಟ್ ಸೆಬೆಸ್ಟಿಯನ್ ಚರ್ಚ್ ಪೆರ್ಮನೂರ್ ರನ್ನರ್ ಪಟ್ಟವನ್ನು ಅಲಂಕರಿಸಿದೆ.

ʻ

 

ತಾರೀಕು 5 ಮತ್ತು 6 ರಂದು ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾಟವು  ನಡೆಯಿತು, ಬಡಬಗ್ಗರ ದೀನ ದಲಿತರಿಗೆ ಹಾಗೂ ವಿವಿಧ ರೋಗಗಳಿಂದ ಬಳಲುವ ಬಡ ರೋಗಿಗಳಿಗೆ ಸಹಾಯ ಹಸ್ತವನ್ನು ನೀಡುವ ಉದ್ದೇಶದಿಂದ ರಾಣಿಪುರ ವೆಲ್ಪೇರ್ ಏಸೋಸಿಯೇಷನ್ ಈ ಚಾರಿಟಿ ಟ್ರೋಫಿ ಪಂದ್ಯಾಟವನ್ನು ಆಯೋಜಿಸಿತ್ತು.

 

 

ತಾ 5 ರಂದು ಬೆಳಿಗ್ಗೆ ಫಾದರ್ ಪಾವೊಸ್ತಿನ್ ಲೂಕಸ್ ಲೋಬೊ ಆಡಳಿತ ಅಧಿಕಾರಿ ಫಾ ಮುಲ್ಲರ್ ಹೋಮಿಯೋಪತಿ, ಇವರು ಕ್ರಿಕೆಟ್ ಪಂದ್ಯಾಟವನ್ನು ಉದ್ಗಾಟಿಸಿ ಶುಭಹಾರೈಸಿದರು. ಈ ಸಂಧರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಜೋಸೆಫ್ ಪಾವ್ಲ್ ಲೋಬೋ ಇವರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ಸುಸೂತ್ರವಾಗಿ ಹಾಗೂ ಬಹಳ ಅಚ್ಚು ಕಟ್ಟಾಗಿ ನಡೆದ ಪಂದ್ಯಾಟಗಳು ತಾ 6.ರಂದು ಸಂಜೆ ಮೂಡಬಿದ್ರೆಯ ಪಾಲಡ್ಕ ತಂಡ ಹಾಗೂ ಪೆರ್ಮನೂರಿನ ಸೆಬಾಸ್ಟಿಯನ್ ತಂಡವು ಫೈನಲ್ ಸೆಣಾಸಾಟ ನಡೆಸಿ ಫಾಲಡ್ಕ ತಂಡ ವಿಜಯಿಯಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವೆಲ್ಫೇರ್ ಎಸೋಸಿಯೇಷನ್ ಅಧ್ಯಕ್ಷರಾದ ಫೆಲಿಕ್ಷ್ ಮೊಂತೇರೋ ವಹಿಸಿಕೊಂಡರು ಮುಖ್ಯ ಅಥಿತಿಗಳಾಗಿ, ಸಾಹಿತಿ ಹಾಗೂ ಪೋಕಸ್ ಇಂಡಿಯಾ ಸಂಘಟನೆಯ ಅಧ್ಯಕ್ಷ ಯುವ ನಾಯಕ ವಿನೋದ್ ಪಿಂಟೋ ತಾಕೋಡೆ , ರೂಪೇಶ್ ನಿಲಿಮಾ ದಂಪತಿಗಳು ರಾಣಿಪುರ, ಶ್ರೀಮತಿ ಗ್ರೇಸಿ ಮೊಂತೇರೊ ರಾಣಿಪುರ , ಚಾರಿಟಿ ಟ್ರೋಫಿ ಸಂಚಾಲಕರಾದ ಜೀವನ್ ಪೆರಾವೊ, ಕೋಶಾಧಿಕಾರಿ ಟೈಟಸ್ ಡಿಸೋಜ ಕಾರ್ಯದರ್ಶಿ ಆಲ್ವಿನ್ ಡಿಸೋಜ ಇವರೆಲ್ಲರು ವೇದಿಕೆಯಲ್ಲಿದ್ದರು, ಅಧ್ಯಕ್ಷ ರಾದ ಫೆಲಿಕ್ಸ್ ಮೊಂತೇರೋ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸರಿ ಸುಮಾರು 20 ಬಡ ರೋಗಿಗಳಿಗೆ ಹಾಗೂ ಅಶಕ್ತರಿಗೆ ಸಹಾಯ ಹಸ್ತವನ್ನು ಚೆಕ್ ಗಳ ಮುಖಾಂತರ ನೀಡಲಾಯಿತು.

ಈ ಸಂಧರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಶ್ರೀ ವಿನೋದ್ ಪಿಂಟೋ ತಾಕೋಡೆಯವರು, ಕ್ರಿಶ್ಚಿಯಿನ್ನರ ಈ ತಪಸ್ಸು ಕಾಲದಲ್ಲಿ ಬಡವರಿಗೆ ದೀನದಲಿತರಿಗೆ ಸಹಾಯ ಮಾಡಿ ಅವರಲ್ಲಿ ದೇವರನ್ನು ಕಾಣುವ ರಾಣಿಪುರ ವೆಲ್ಫೇರ್ ಸಂಘಟನೆಯ ಕಾರ್ಯವನ್ನು ಶ್ಲಾಗಿಸಿದರು ಇಂಥಹ ಸಂಘಟನೆಗಳು ಉತ್ತಮ ಹಾಗೂ ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಇಂಥಹ ಪಂದ್ಯಾಟಗಳು ಹಾಗೂ ಚಾರಿಟಿ ವರ್ಕ್ ಮುಂದಿನ ವರುಷಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು ಕಾರ್ಯದರ್ಶಿ ಆಲ್ವಿನ್ ಡಿಸೋಜ ವಂದಿಸಿದರು. ಡೆಲನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.

 

 

 

ಗೆದ್ದ ತಂಡಗಳ ವಿವರ
ವಿನ್ನರ್
ಸೈಂಟ್ ಲೋಯೋಲಾ ಚರ್ಚ್ ಪಾಲಡ್ಕ
ಟ್ರೋಫಿ ಹಾಗೂ 30 ಸಾವಿರ ನಗದು

ರನ್ನರ್
ಸೇಂಟ್ ಸೆಬೇಸ್ಟಿಯನ್ ಚರ್ಚ್ ಪೆರ್ಮನೂರ್
ಟ್ರೋಫಿ ಹಾಗೂ 20 ಸಾವಿರ ನಗದು
ತೃತೀಯ
MYC ಮರೀಲ್ ಹಾಗೂ ಪೆರ್ಮನೂರ್ ಸ್ಟೋರ್ಟ್ಸ್ ಕ್ಲಬ್

ವೈಯುಕ್ತಿಕ ಬಹುಮಾನಗಳು
ಮ್ಯಾನ್ ಆಫ್ ದಿ ಮ್ಯಾಚ್
ನಿತಿನ್ ಪಾಲಡ್ಕ

ಮ್ಯಾನ್ ಆಫ್ ಧಿ ಸೀರಿಸ್ ಮತ್ತು ಬೆಸ್ಟ್ ಬ್ಯಾಟ್ಸ್ಮನ್
ಗ್ಲೆನ್ ಸನ್ ಪಾಲಡ್ಕ

ಬೆಸ್ಟ್ ಬೌವ್ಲರ್
ಕೊನ್ವೆಲ್ ಪೆರ್ಮನೂರ್

error: Content is protected !!