ಇಡೀ ಊರಿನ ನಿದ್ದೆಗೆಡಿಸಿದ ನಿಗೂಢ ಮಹಿಳೆ…! ಒಮ್ಮೆಲೆ ಕಾಣಿಸ್ತಾಳೆ, ದಿಢೀರ್‌ ಮಾಯವಾಗ್ತಾಳೆ… ಈಕೆಯ ಹಿಂದೆ ಬಿದ್ದ ಪೊಲೀಸರಿಗೆ ಆಗಿದ್ದೇನು?

ಮಧ್ಯಪ್ರದೇಶ: ಭೂತ, ಪ್ರೇತಗಳ ಇರುವಿಕೆಯ ಅನುಭವ ಸಾಮಾನ್ಯವಾಗಿ ಬಹುತೇಕ ಮಂದಿಗೆ ಆಗಿದ್ದಿದೆ. ಕೆಲವು ನಿಗೂಢ ರಹಸ್ಯಗಳು ಮೊಬೈಲ್‌, ಸಿಸಿ ಟಿವಿಗಳಲ್ಲಿ ಸೆರೆಯಾಗಿದ್ದೂ ಇವೆ. ಅದರಲ್ಲಿ ಶೇ.90 ಎಡಿಟೆಡ್‌ ವಿಡಿಯೋ ಫೂಟೇಜ್‌ಗಳಾಗಿರುತ್ತವೆ. ಕಾನ್ಸ್ಫಿರೆಸಿ ಥಿಯರಿ ಪ್ರಕಾರ ಈ ಭೂಮಿಯಲ್ಲಿ ಏಲಿಯನ್ಸ್, ರೆಪ್ಟೇಲಿಯನ್ಸ್‌ ನಮ್ಮ ಜೊತೆಯೇ ಇದ್ದಾರೆ ಎನ್ನುವ ಮಾಹಿತಿಗಳನ್ನು ಸಾಕ್ಷಿ ಸಮೇತ ಜನತೆಯ ಮುಂದಿಡುತ್ತಾರೆ. ಇದೀಗ ನಿಗೂಢ ಮಹಿಳೆಯೊಬ್ಬಳು ಆಗಾಗ ಕಾಣಿಸಿ ಜನರನ್ನಷ್ಟೇ ಅಲ್ಲದೆ ಪ್ರಾಣಿಗಳನ್ನೂ ಬೆಚ್ಚಿಬೀಳಿಸುತ್ತಿದ್ದಾಳೆ.

ಹೌದು, ಇಂತಹ ಬೆಚ್ಚಿಬೀಳಿಸುವ ಘಟನೆಗಳು ನಡೆಯುತ್ತಿರುವುದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ನಿಗೂಢ ಮಹಿಳೆಯೊಬ್ಬಳು ರಾತ್ರಿಯ ವೇಳೆ ಕಾಣಿಸುತ್ತಾಳೆ. ಕೆಲವೊಮ್ಮೆ ಡೋರ್‌ಬೆಲ್ ಬಾರಿಸುತ್ತ ಕೊನೆಗೆ ಗಾಳಿಯಲ್ಲಿ ಮಾಯವಾಗುತ್ತಾಳೆ. ಇದರ ದೃಶ್ಯಗಳು ಮನೆಯಲ್ಲಿ ಇರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.

ರಾಜ ಮಂಡಿ ಮತ್ತು ಸೋನಾ ಗಾರ್ಡನ್ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳ ಹಲವಾರು ತುಣುಕುಗಳು ಮಹಿಳೆ ಡೋರ್‌ಬೆಲ್ ಬಾರಿಸಿ ಬಳಿಕ ಕಣ್ಮರೆಯಾಗುತ್ತಿರುವುದನ್ನು ನೋಡಬಹುದಾಗಿದೆ. ಇದು ನಕಲಿ ಎಂದು ಸಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದರೂ ಇದರ ವರದಿಯನ್ನು ಇಂಡಿಯಾ ಟುಡೇ ಕೂಡಾ ಪ್ರಕಟಿಸಿದೆ. ಪೊಲೀಸರಿಗೂ ಇಂತಹ ಅನುಭವಗಳಾಗಿದ್ದು, ಅವರೂ ಕೂಡಾ ಬೆಚ್ಚಿಬಿದ್ದಿದ್ದಾರೆ.


ಈಕೆ ಕಾಣಿಸಿಕೊಂಡ ತಕ್ಷಣ, ದನಗಳು ಮತ್ತು ಬೀದಿ ನಾಯಿಗಳು ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿರುವುದನ್ನು, ಈ ಮಹಿಳೆ ಹೋದ ಜಾಗವನ್ನೇ ದಿಟ್ಟಿಸಿ ನಾಯಿಗಳ ವಿಚಿತ್ರವಾಗಿ ಕೂಗುವುದನ್ನು ಕೇಳಬಹುದಾಗಿದೆ. ಸಲ್ವಾರ್-ಕಮೀಜ್ ಧರಿಸಿದ ಮಹಿಳೆ, ಈ ವಿಡಿಯೋದಲ್ಲಿ ಕಂಡುಬರುವಂತೆ, ಮುಖವನ್ನು ಉದ್ದವಾದ ದುಪ್ಪಟ್ಟಾದಿಂದ ಮುಚ್ಚಿಕೊಂಡಿದ್ದಾಳೆ. ಆಕೆಯ ಎರಡೂ ಪಾದಗಳನ್ನು ಬಟ್ಟೆಯಿಂದ ಸುತ್ತಿಕೊಂಡಿರುವಂತೆ ಕಾಣುತ್ತದೆ. ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ, ಇದೇ ರೀತಿಯ ದೂರು ದಾಖಲಾಗಿತ್ತು. ಆದರೆ ಕ್ರಮೇಣ ಇದು ಕಡಿಮೆಯಾಗಿ ಜನರು ಇದನ್ನು ಮರೆತೇ ಹೋಗಿದ್ದರು. ಆದರೆ ಇದೀಗ ಮತ್ತೆ ನಿವಾಸಿಗಳಿಗೆ ಆತಂಕ ಶುರುವಾಗಿದೆ.

ಈ ಪ್ರಕರಣದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ಅವರು ತಮಗೆ ಯಾವುದೇ ಔಪಚಾರಿಕ ದೂರುಗಳು ದಾಖಲಾಗಿಲ್ಲ. ಆದರೆ ಸೋಷಿಯಲ್​​ ಮೀಡಿಯಾದಲ್ಲಿ ಬಂದಿರುವ ಮಾಹಿತಿ ಆಧರಿಸಿ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಈ ಮಹಿಳೆಯನ್ನು ನಾವೂ ನೋಡಿದ್ದೇವೆ. ಯಾರಾದರೂ ದೂರು ದಾಖಲು ಮಾಡಿದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇದರ ಹೊರತಾಗಿಯೂ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲು ಠಾಣಾ ಉಸ್ತುವಾರಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ರೆಪ್ಟೇಲಿಯನ್‌ಗಳಿಗೆ ಇಂತಹ ಶಕ್ತಿ ಇದ್ದು, ಅವುಗಳು ಸಾಮಾನ್ಯವಾಗಿ ಮನುಷ್ಯರಂತೆಯೇ ಇರುತ್ತಾರೆ. ಇವರ ಜೀವನ ರಹಸ್ಯಮಯವಾಗಿದ್ದು, ಸಾಮಾನ್ಯ ಜನರಿಗೆ ಅವರ ವರ್ತನೆಗಳು ಅಚ್ಚರಿ ತರುತ್ತವೆ. ಈ ಜಗತ್ತನ್ನು ನಿಂತ್ರಿಸುವವರು ಇವರೇ ಎನ್ನುವ ಮಾಹಿತಿ ಇದೆ. ಕೆಲವೊಮ್ಮೆ ಅವರಿಗೆ ಮಾಯವಾಗುವ, ತನ್ನ ದೇಹವನ್ನು ಬದಲಿಸುವ ಶಕ್ತಿ ಇರುತ್ತದೆ. ಕೆಲವೊಮ್ಮೆ ಅವರ ರಹಸ್ಯ ಜೀವನಗಳು ಈ ರೀತಿ ಬಯಲಾಗುತ್ತಿರುವ ಬಗ್ಗೆ ಕಾನ್ಸ್ಪಿರೆಸಿ ಥಿಯರಿ ಹೇಳುತ್ತದೆ.

 

https://www.instagram.com/reel/DHnbThXJWQc/?utm_source=ig_web_copy_link

error: Content is protected !!