ರನ್ಯಾ ರಾವ್‌ ಕಳ್ಳ ಸಾಗಣೆ ಮಾಡುತ್ತಿದ್ದ ಚಿನ್ನವನ್ನು ಮಾರಾಟ ಮಾಡುತ್ತಿದ್ದದ್ದು ಯಾರು?

ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮೂರನೇ ಆರೋಪಿ ಸಾಹಿಲ್ ಜೈನ್ ವಿಚಾರಣೆ ಡಿಆರ್​​​ಐಗೆ ಸಿಕ್ಕ ಡಿಜಿಟಲ್ ಸಾಕ್ಷಿಯಲ್ಲಿ ಚಿನ್ನ ಕಳ್ಳಸಾಗಣೆ ರಹಸ್ಯ ಬಯಲಾಗಿದೆ. ಕಳ್ಳಸಾಗಣೆ ಮಾಡಿದ್ದ ಚಿನ್ನ ಮಾರಾಟಕ್ಕೆ ಹಲವು ಬಾರಿ ಸಹಾಯ ಮಾಡಿರುವುದಾಗಿ ಸಾಹಿಲ್ ಜೈನ್ ಒಪ್ಪಿಕೊಂಡಿದ್ದಾನೆ.

Who Is Ranya Rao? Know All The Actor Arrested In Gold Smuggling In Bangalore Airport

ಸಾಹಿಲ್ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ದುಬೈಗೆ ಹಣ ವರ್ಗಾವಣೆ ಮಾಡಿದ್ದನ್ನು ಡಿಆರ್​ಐ ಪತ್ತೆಮಾಡಿದೆ. ಚಿನ್ನ ಮಾರಾಟ ಮಾಡಿದ್ದು ಕೂಡ ವಾಟ್ಸ್​ಆ್ಯಪ್​ ಚಾಟ್​ನಿಂದ ಬಹಿರಂಗವಾಗಿದೆ. ಮಾರ್ಚ್ 3ರಂದು ರನ್ಯಾ ರಾವ್, ದುಬೈ ನಂಬರ್​​ನಿಂದ ಸಾಹಿಲ್​ಗೆ ಕರೆ ಮಾಡಿದ್ದ ವೇಳೆ ಚಿನ್ನ ವಿಲೇವಾರಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದು ಪತ್ತೆಯಾಗಿದೆ. ಹವಾಲಾ ದಂಧೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾಗಿ ಜೈನ್ ತನಿಖಾಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ, ದುಬೈನಲ್ಲಿ ಚಿನ್ನ ಖರೀದಿಗೆ ಹವಾಲಾ ಮೂಲಕ ಹಣ ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ, ಡಿಆರ್​​ಐ ಅಧಿಕಾರಿಗಳು ಸಾಹಿಲ್ ಜೈನ್ ವಿಚಾರಣೆಯನ್ನು ಮುಂದುವರಿಸಿದ್ದಾರೆ.

Who Is Ranya Rao? Know All The Actor Arrested In Gold Smuggling In Bangalore Airport

 

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಮೊದಲ ಆರೋಪಿಯಾಗಿದ್ದರೆ, ಆಕೆಯ ಮಾಜಿ ಬಾಯ್‌ಫ್ರೆಂಡ್ ತರುಣ್‌ ರಾಜ್ ಎರಡನೇ ಆರೋಪಿಯಾಗಿದ್ದಾನೆ. ಸಾಹಿಲ್ ಜೈನ್ ಮೂರನೇ ಆರೋಪಿ.

ಯಾರು ಈ ಸಾಹಿಲ್ ಜೈನ್?


ಬಳ್ಳಾರಿ ಮೂಲದ ಸಾಹಿಲ್ ಜೈನ್ ಜ್ಯುವೆಲ್ಲರಿ ಅಂಗಡಿ ಮಾಲೀಕ. ಮಹೇಂದ್ರ ಜೈನ್‌ ಎಂಬ ಬಟ್ಟೆ ವ್ಯಾಪಾರಿಯ ಮಗನಾಗಿರುವ ಸಾಹಿಲ್, ಆರಂಭದಲ್ಲಿ ಸೋದರ ಮಾವನ ಜೊತೆ ಮುಂಬೈನಲ್ಲಿ ವಾಸವಿದ್ದ. ನಂತರ ಚಿನ್ನದ ಉದ್ಯಮ ಆರಂಭಿಸಿದ್ದ. ಆ ಸಂದರ್ಭದಲ್ಲಿ ಸ್ಮಗ್ಲಿಂಗ್ ಪ್ರಕರಣವೊಂದರಲ್ಲಿ ಆತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ನಂತರ ಪ್ರಕರಣದಿಂದ ಬಚಾವಾಗಿದ್ದ ಸಾಹಿಲ್ ಜೈನ್ ಇದೀಗ ರನ್ಯಾ ಪ್ರಕರಣದಲ್ಲೂ ಚಿನ್ನ ಮಾರಾಟಕ್ಕೆ ಸಹಾಯ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಆತನನ್ನು ಡಿಆರ್​ಐ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಸಾಹಿಲ್ ಡಿಆರ್​​ಐ ಕಸ್ಟಡಿಯಲ್ಲಿದ್ದಾನೆ.

error: Content is protected !!