ಮಂಗಳೂರು: ಕರಾವಳಿಯ ಮುಸ್ಲಿಮರು ಇಂದು ಮುಂಜಾನೆಯಿಂದ ಅತ್ಯಂತ ಸಡಗರ, ಸಂಭ್ರಮದಿಂದ ಪವಿತ್ರ ರಮಝಾನ್ ಹಬ್ಬವನ್ನು ಆಚರಿಸಿದರು.
ತುಳುನಾಡಿನ ಜಿಲ್ಲೆಗಳಾದ ದ.ಕ. ಮತ್ತು ಉಡುಪಿಯ ಸಮಸ್ತ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ ನೆರವೇರಿತು. ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.
ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿದರು. ಜಿಲ್ಲೆಯ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ನೆರವೇರಿತು. ಗಣ್ಯರು ಮಸ್ಜೀದ್‌ಗಳಿಗೆ ಭೇಟಿ ನೀಡಿ ಮುಸ್ಲಿಂ ಬಂಧುಗಳಿಗೆ ರಮಝಾನ್ ಶುಭಾಶಯ ಕೋರಿದರು.
ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮುಖಂಡರಾದ ಪದ್ಮರಾಜ್ ಆರ್., ಮತ್ತಿತರರು ಶುಭಾಶಯ ಕೋರಿದರು.